Home » ಬೆಳ್ತಂಗಡಿ | ಸುರೇಶ್ ಆರ್ಟ್ಸ್ ಮಾಲಕ ಸುರೇಶ್ ಭಟ್ ನಿಧನ

ಬೆಳ್ತಂಗಡಿ | ಸುರೇಶ್ ಆರ್ಟ್ಸ್ ಮಾಲಕ ಸುರೇಶ್ ಭಟ್ ನಿಧನ

0 comments

ಬೆಳ್ತಂಗಡಿಯ ಖ್ಯಾತ ಕಲಾವಿದ ಸುರೇಶ್ ಭಟ್ (50) ಅವರು ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.

ಇವರು ಮೇಲಂತಬೆಟ್ಟು ಗ್ರಾಮದ ನಿವಾಸಿಯಾಗಿದ್ದು,
ಸುಮಾರು 25 ವರ್ಷಗಳಿಂದ ಬೆಳ್ತಂಗಡಿಯ ಸಂತೆಕಟ್ಟೆ ಐಡಿಯಲ್ ಕಾಂಪ್ಲೆಕ್ಸ್ ಬಳಿ ಕಾರ್ಯಾಚರಿಸುತ್ತಿದ್ದ ಸುರೇಶ್ ಆರ್ಟ್ಸ್ ಸಂಸ್ಥೆಯ ಮಾಲಕರಾಗಿದ್ದರು.

ಹವ್ಯಾಸಿ ಲೇಖಕರಾಗಿಯೂ ಹೆಸರುವಾಸಿಯಾಗಿದ್ದರು. ಈ ಹಿಂದೆ ‘ಬಣ್ಣದ ಕೊಡೆ’ ಎಂಬ ಚಲನಚಿತ್ರಕ್ಕೆ ಸಂಗೀತ, ಸಾಹಿತ್ಯ ರಚನಾಕಾರರಾಗಿ ಕೆಲಸ ನಿರ್ವಹಿಸಿದ್ದರು. ಹಾಗೆಯೇ ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನೂ ನೀಡುತ್ತಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

You may also like

Leave a Comment