Home » ಬೆಳ್ತಂಗಡಿ| ಮೆದುಳಿನ ರಕ್ತಸ್ರಾವ : ಶಿಕ್ಷಕಿ ಪವಿತ್ರಾ ಕುಮಾರಿ ನಿಧನ

ಬೆಳ್ತಂಗಡಿ| ಮೆದುಳಿನ ರಕ್ತಸ್ರಾವ : ಶಿಕ್ಷಕಿ ಪವಿತ್ರಾ ಕುಮಾರಿ ನಿಧನ

by Praveen Chennavara
0 comments

ಬೆಳ್ತಂಗಡಿ : ಪಿಲ್ಯ ಗ್ರಾಮದ ನಿವಾಸಿ, ಮಂಗಳೂರಿನ ಮಾಂಡೋವಿ ಮೋಟಾರ್ಸ್ ಟೂ ವಾಲ್ಯೂ ಸಂಸ್ಥೆಯ ವ್ಯವಸ್ಥಾಪಕ ಅಕ್ಷಯ್ ಕುಮಾರ್ ಅವರ ಪತ್ನಿ ಪವಿತ್ರಾ ಕುಮಾರಿ(30.ವ) ರವರು ಅಸೌಖ್ಯದಿಂದ ಅ.11 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೆದುಳಿನ ರಕ್ತಸ್ರಾವ ಖಾಯಿಲೆಯಿಂದ ಬಳಲುತ್ತಿದ್ದ ಇವರಿಗೆ ಎರಡು ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆದಿದ್ದು, ಬಳಿಕ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಾಯಿಲೆ ಉಲ್ಬಣಗೊಂಡ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಇವರು ಪಿಲ್ಯ ಗುಡ್ ಪ್ಯೂಚರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಮೃತರು ಪತಿ ಅಕ್ಷಯ್ ಕುಮಾರ್, ಮಾವ ಸುದ್ದಿ ಪ್ರತಿನಿಧಿ ಧರ್ಮರಾಜ್ ಜೈನ್, ಅತ್ತೆ ಶ್ರೀದೇವಿ ಡಿ ಜೈನ್, ಓರ್ವ ಪುತ್ರ ಅಯನ್ ಜೈನ್, ಪುತ್ರಿ ಐರಾ ಜೈನ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

You may also like

Leave a Comment