Home » ಬೆಳ್ತಂಗಡಿ | ಆಕಸ್ಮಿಕವಾಗಿ ಬಾವಿಗೆ ಬಿದ್ದು ಯುವತಿ ಸಾವು

ಬೆಳ್ತಂಗಡಿ | ಆಕಸ್ಮಿಕವಾಗಿ ಬಾವಿಗೆ ಬಿದ್ದು ಯುವತಿ ಸಾವು

0 comments

ಯುವತಿಯೋರ್ವಳು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನ ಗೋಳಿಯಂಗಡಿಯ ಎಸ್.ಡಿ.ಎಮ್.ಐಟಿಐ ಕಾಲೇಜು ಬಳಿ ನಡೆದಿದೆ.

ಐಷಾತುಲಾ ಅನಿಷಾ(18) ಮೃತ ಯುವತಿ ಎಂದು ಗುರುತಿಸಲಾಗಿದೆ.

ಈಕೆ ದಿನಾಲೂ ಬಟ್ಟೆ ಒಗೆದು ಬಾವಿ ಕಟ್ಟೆ ಬಳಿ ಒಣಗಲು ಹಾಕುತ್ತಿದ್ದಳು. ಪ್ರತೀ ಬಾರಿಯಂತೆ ಇಂದು ಕೂಡ ಒಣಗಿಸಲು ಬಾವಿಯ ಕಟ್ಟೆ ಬಳಿ ಹೋದಾಗ ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಯುವತಿ ಐಷಾತುಲಾ ಅನಿಷಾರಿಗೆ ದೃಷ್ಟಿ ಸಮಸ್ಯೆ ಇತ್ತೆಂದು ಹೇಳಲಾಗುತ್ತಿದೆ .

ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಹಾಗೂ ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment