Home » Belthangady: ಬೆಳ್ತಂಗಡಿ: 4 ದಿನಗಳಿಂದ ಹೆದ್ದಾರಿಯಲ್ಲಿ ಅನಾಥವಾಗಿ ನಿಂತಿರುವ ಬೈಕ್! ಸ್ಥಳೀಯವಾಗಿ ಹಲವು ಅನುಮಾನ?

Belthangady: ಬೆಳ್ತಂಗಡಿ: 4 ದಿನಗಳಿಂದ ಹೆದ್ದಾರಿಯಲ್ಲಿ ಅನಾಥವಾಗಿ ನಿಂತಿರುವ ಬೈಕ್! ಸ್ಥಳೀಯವಾಗಿ ಹಲವು ಅನುಮಾನ?

0 comments

Belthangady: ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ನಿಡಿಗಲ್‌ ಸೀಟು ರಾಷ್ಟ್ರೀಯ ಹೆದ್ದಾರಿಯಲ್ಲಿ ರಕ್ಷಿತರಣ್ಯದ ಕುಕ್ಕುದ ಕಟ್ಟೆ ಬಳಿ ಕಳೆದ ಮೂರು ದಿನಗಳಿಂದ ಬೈಕೊಂದು ಅನಾಥ ರೀತಿಯಲ್ಲಿ ಸೈಡ್ ಸ್ಟ್ಯಾಂಡ್ ಹಾಕಿ ನಿಲ್ಲಿಸಿರುವುದು ಕಂಡುಬಂದಿದೆ.

ಮೇಲ್ನೋಟಕ್ಕೆ ಯಾರೋ ಬೈಕ್‌ ನಿಲ್ಲಿಸಿ ಹೋಗಿರ ಬಹುದು ಎಂಬಂತೆ ಕಂಡು ಬರುವುದರಿಂದ ಯಾರೂ ನಿಲ್ಲಿಸಿರುವ ಬೈಕ್‌ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ ಅದರೆ ದಿನ ನಿತ್ಯ ಪ್ರಯಾಣಿಸುವ ವಾಹನ ಸವಾರರು ಗಮನ ಹರಿಸಿ ಕಳೆದ 4 ದಿನಗಳಿಂದ ಬೈಕ್ ನಿಂತಲ್ಲಿಯೇ ಇದ್ದು, ಅದರ ಹ್ಯಾಂಡಲ್ ನಲ್ಲಿ ಪ್ಲಾಸ್ಟಿಕ್ ಚೀಲ ಹಾಗೂ ಒಂದು ಶರ್ಟ್ ಇದ್ದು. ರಾಮನಗರ ನೋಂದಾವಣೆಯ ನಂಬ‌ರ್ ಬೈಕ್‌ ನಲ್ಲಿ ಇದೆ ಎಂಬ ಮಾಹಿತಿ ನೀಡಿದ್ದಾರೆ.

ಆದ್ರೆ ಈ ಬಗ್ಗೆ ಹಲವು ಅನುಮಾನ ಸ್ಥಳೀಯವಾಗಿ ಮೂಡುತಿದ್ದು, ಈ ಬಗ್ಗೆ ಈಗಾಗಲೇ ಪೊಲೀಸ್‌ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತನಿಖೆಯಿಂದ ಇನ್ನಷ್ಟೇ ಉತ್ತರ ದೊರಕಲಿದೆ.

You may also like