8
Mudigere : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ದೇವರ ಮನೆ ಬೆಟ್ಟದ ಬಳಿ ಬೆಳ್ತಂಗಡಿ ಯುವಕರು ರಸ್ತೆ ಮಧ್ಯದಲ್ಲಿ ರಂಪಾಟ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
ಹೌದು, ದೇವರಮನೆಗೆ ಹೋಗುವ ನಡುರಸ್ತೆಯಲ್ಲಿ ತಲೆ, ಮುಖದ ಮೇಲೆಲ್ಲ ಕೇಕ್ ಮೆತ್ತಿಕೊಂಡು ಹುಟ್ಟುಹಬ್ಬ ಆಚರಿಸಿ ರಂಪಾಟ ಮಾಡಿದ ಬೆಳ್ತಂಗಡಿ ಮೂಲದ 9 ಮಂದಿ ಯುವಕರನ್ನು ಬಣಕಲ್ ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವಕರು ಸ್ನೇಹಿತನ ಬರ್ತ್‌ಡೇ ಆಚರಿಸಲು ದೇವರಮನೆಗೆ ಬಂದಿದ್ದರು.ಇಲ್ಲಿ ನಡುರಸ್ತೆಯಲ್ಲೇ ರಿಕ್ಷಾ, ಕಾರುಗಳನ್ನು ನಿಲ್ಲಿಸಿದ್ದಲ್ಲದೆ ಮದ್ಯಪಾನವನ್ನೂ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲಿನ ರಸ್ತೆ ಕಿರಿದಾಗಿದ್ದು, ಪ್ರಪಾತದ ಸಮೀಪವಿದೆ. ಇಂತಹ ಸ್ಥಳದಲ್ಲಿ ನಿಯಮ ಉಲ್ಲಂಘಿಸಿ ಬರ್ತ್‌ಡೇ ಆಚರಣೆಗೆ ಇಳಿದಿರುವುದು ಅಪಾಯವನ್ನು ಆಹ್ವಾನಿಸುತ್ತಿತ್ತು.ಮಾಹಿತಿ ಪಡೆದ ಪೊಲೀಸರು ಯುವಕರನ್ನು ವಶಕ್ಕೆ ತೆಗೆದುಕೊಂಡರು.
