Home » Belthangady: ಮನೆಗೆ ನುಗ್ಗಿ 14 ಲಕ್ಷ ರೂ ಮೌಲ್ಯದ ನಗ, ನಗದು ಕಳವು!

Belthangady: ಮನೆಗೆ ನುಗ್ಗಿ 14 ಲಕ್ಷ ರೂ ಮೌಲ್ಯದ ನಗ, ನಗದು ಕಳವು!

0 comments

Belthangady: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬೀಗ ಮುರಿದು ಒಳಗೆ ನುಗ್ಗಿದ್ದು 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಿದ ಘಟನೆ ಮಾಲಾಡಿ ಗ್ರಾಮದ ಕೊಲ್ಪೆದಬೈಲು ಎಂಬಲ್ಲಿ ನಡೆದಿದೆ.

ಕೊಲ್ಪೆದ ಬೈಲು ನಿವಾಸಿ ವಸಂತಿ ಹೆಗ್ಡೆ ಎಂಬುವವರ ಮನೆಯಲ್ಲಿ ಕಳ್ಳತವಾಗಿದೆ. ಎ.20 ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿ ಬೆಳ್ತಂಗಡಿಗೆ ತೆರಳಿದ ಇವರು ಸಂಜೆ ಮನೆಗೆ ಬಂದು ನೋಡಿದಾಗ ಮನೆಯ ಮುಂದಿನ ಬಾಗಿಲಿನ ಬೀಗ ಒಡೆದಿರುವುದು ಕಂಡು ಬಂದಿದ್ದು, ಪರಿಶೀಲನೆ ಮಾಡಿದಾಗ ಕಪಾಟಿನಲ್ಲಿ ಇಟ್ಟಿದ್ದ 30000 ರೂ, 160.5ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿರುವುದು ಕಂಡು ಬಂದಿದೆ.

ಚಿನ್ನಾಭರಣಗಳ ಒಟ್ಟು ಮೌಲ್ಯ 13,72,000 ರೂ. ಎಂದು ಅಂದಾಜಿಸಲಾಗಿದೆ. ನಗದು ಚಿನ್ನ ಸೇರಿ ಒಟ್ಟು 14,02,000 ರೂ. ಕಳ್ಳತನವಾಗಿದೆ.

ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದು ಪರಿಶೀಲನೆ ಮಾಡಿ, ಪ್ರಕರಣ ದಾಖಲು ಮಾಡಿದ್ದಾರೆ.

You may also like