Home » Belthangady: ಮಂಗಳೂರು-ಹಾಸನ ಪೆಟ್ರೋನೆಟ್‌ ಡೀಸೆಲ್‌ ಪೈಪ್‌ಲೈನಿಗೆ ಕನ್ನ; ದೂರು ದಾಖಲು

Belthangady: ಮಂಗಳೂರು-ಹಾಸನ ಪೆಟ್ರೋನೆಟ್‌ ಡೀಸೆಲ್‌ ಪೈಪ್‌ಲೈನಿಗೆ ಕನ್ನ; ದೂರು ದಾಖಲು

2 comments
Belthangady

Belthangady: ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ಆಲಡ್ಕ ಎಂಬಲ್ಲಿಂದ ಡೀಸೆಲ್‌ ಪೈಲ್‌ ಲೈನ್‌ವೊಂದು ಹಾದು ಹೋಗಿದ್ದು, ಕಳ್ಳರು ರಂಧ್ರ ಕೊರೆದು 9.60 ಲಕ್ಷ ಮೌಲ್ಯದ ಡೀಸೆಲ್‌ ಕಳ್ಳತನವಾಗಿರುವ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Crime News: ಮೃತ ತಂದೆಯ ಪಿಎಫ್ ಹಣ ಕೇಳಲು ಹೋದ ಯುವತಿಯನ್ನು ತನ್ನ ಜೊತೆ ಮಲಗುವಂತೆ ಕೇಳಿದ್ದ ಖಾಸಗಿ ಕಂಪನಿ ಹೆಚ್.ಆರ್. ಮ್ಯಾನೇಜರ್ ವಿರುದ್ಧ ದೂರು ದಾಖಲು

ಕೇರಳದ ಅಲಪ್ಪುಝ ಜಿಲ್ಲೆ ಮಾವೇಲಿಕ್ಕರ ನಿವಾಸಿ ರಾಜನ್‌ ಜಿ ಎಂಬುವರು ಈ ಕುರಿತು ದೂರು ನೀಡಿದ್ದಾರೆ. ಇವರು ಸ್ಟೇಷನ್‌ ಇನ್‌ಚಾರ್ಜ್‌. ಮಂಗಳೂರು, ಹಾಸನ ಬೆಂಗಳೂರಿಗೆ ಈ ಪೆಟ್ರೋನೆಟ್‌ ಪೈಪ್‌ ಮೂಲಕ ಡೀಸೆಲ್‌ ಸರಬರಾಜು ಆಗುತ್ತಿದ್ದು, ಈ ಕಳ್ಳತನ ಪುದುವೆಟ್ಟು ಗ್ರಾಮದ ಆಲಡ್ಕ ಎಂಬಲ್ಲಿ ಡೀಸೆಲ್‌ ಪೈಪ್‌ ಲೈನ್‌ ಕೊರೆದು ಡೀಸೆಲ್‌ ಕಳ್ಳತನ ಮಾಡಿದ್ದಾರೆ. ಈ ಘಟನೆ ಮಾ.16ರ ರಾತ್ರಿಯಿಂದ ಮಾ.19 ರಂದು ರಾತ್ರಿಯ ನಡುವೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: Political News: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಪ್ರಕರಣ : ಟಿಎಂಸಿ ಮಾಜಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಎಫ್ಐಆರ್ ದಾಖಲಿಸಿದ ಸಿಬಿಐ

2.5 ಇಂಚು ಗಾತ್ರದ ರಂಧ್ರ ಕೊರೆದಿದ್ದು, ಹೆಚ್‌ಡಿಪಿಇ ಪೈಪ್‌ ಮೂಲಕ ಅಂದಾಜು 12,000 ಲೀಟರ್‌ ಡೀಸೆಲ್‌ ಕಳವು ಮಾಡಲಾಗಿದೆ ಎಂದು ವರದಿಯಾಗಿದೆ. ಇದರ ಮೌಲ್ಯ Rs.9,60,000 ಎಂದು ಅಂದಾಜು ಮಾಡಲಾಗಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

You may also like

Leave a Comment