Home » Belthangady: ಮಿನಿಲಾರಿ ಮತ್ತು ಬೈಕ್‌ ನಡುವೆ ಭೀಕರ ಅಪಘಾತ; ಬೈಕಿನಲ್ಲಿದ್ದ ನಾಲ್ವರು ಸಾವು

Belthangady: ಮಿನಿಲಾರಿ ಮತ್ತು ಬೈಕ್‌ ನಡುವೆ ಭೀಕರ ಅಪಘಾತ; ಬೈಕಿನಲ್ಲಿದ್ದ ನಾಲ್ವರು ಸಾವು

0 comments

Belthangady: ಕಾರ್ಕಳ ತಾಲೂಕಿನ ನಲ್ಲೂರು ಪಾಜೆಗುಡ್ಡೆ ಬಳಿ ಬೈಕ್‌ ಮತ್ತು ಗೂಡ್ಸ್‌ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಬೈಕ್‌ನಲ್ಲಿ ಐದು ಮಂದಿಯಲ್ಲಿ ನಾಲ್ವರು ಮೃತಪಟ್ಟ ಘಟನೆ ನಡೆದಿದೆ.

ಬೈಕ್‌ನಲ್ಲಿದ್ದ ಐದು ಜನರಲ್ಲಿ ಮೂರು ಮಕ್ಕಳು ಸೇರಿ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ.

ಬೈಕ್‌ನಲ್ಲಿದ್ದ ಪತಿ, ಪತ್ನಿ ಮತ್ತು ಮೂರು ಮಕ್ಕಳಲ್ಲಿ ಪತ್ನಿಯನ್ನು ಬಿಟ್ಟು ಉಳಿದವರೆಲ್ಲರೂ ಮೃತ ಹೊಂದಿದ್ದಾರೆ. ಪಾಜೇಗುಡ್ಡೆ ಬಳಿ ಗೂಡ್ಸ್‌ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಬೈಕ್‌ನಲ್ಲಿ ಸುರೇಶ್‌ ಆಚಾರ್ಯ (36 ವರ್ಷ), ಮೀನಾಕ್ಷಿ ಹೆಂಡತಿ (32 ವರ್ಷ), ಸುಮಿಕ್ಷಾ ಮಗಳು (7 ವರ್ಷ), ಸುಶ್ಮಿತಾ (5 ವರ್ಷ) ಸುಶಾಂತ್‌ (2 ವರ್ಷ) ಸವಾರರಿದ್ದು, ಪತ್ನಿಯನ್ನು ಹೊರತುಪಡಿಸಿ ಉಳಿದೆಲ್ಲರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತಪಟ್ಟವರು ವೇಣೂರು ಗಾಂಧಿ ನಗರದವರು ಎನ್ನಲಾಗಿದೆ.

You may also like

Leave a Comment