Home » ಬೆಳ್ತಂಗಡಿ : ವ್ಯಕ್ತಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಶಂಕೆ | ಕೆರೆ ಬಳಿ ಜನಸ್ತೋಮ | ವ್ಯಕ್ತಿಗಾಗಿ ಹುಡುಕಾಟ

ಬೆಳ್ತಂಗಡಿ : ವ್ಯಕ್ತಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಶಂಕೆ | ಕೆರೆ ಬಳಿ ಜನಸ್ತೋಮ | ವ್ಯಕ್ತಿಗಾಗಿ ಹುಡುಕಾಟ

0 comments

ಬೆಳ್ತಂಗಡಿ: ವ್ಯಕ್ತಿಯೋರ್ವರು ಕೆರೆಗೆ ಹಾರಿರುವ ಸಂಶಯದ ಆಧಾರದ ಮೇಲೆ ಗುರುವಾಯನಕೆರೆಯಲ್ಲಿ ಧರ್ಮಸ್ಥಳ ಶೌರ್ಯ ವಿಪತ್ತು ತಂಡವು ಹುಡುಕಾಟ ಮಾಡುತ್ತಿದ್ದಾರೆ. ಕೊಂಟುಪಳಿಕೆ ನಿವಾಸಿ ರಿಕ್ಷಾ ಚಾಲಕ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿಯ ಆಧಾರದ ಮೇಲೆ ಕೆರೆಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

ಏಕೆಂದರೆ ಸ್ಥಳೀಯ ರಿಕ್ಷಾ ಡ್ರೈವರ್ ಒಬ್ಬರ ಕೆಲವು ದಾಖಲೆಗಳು ಕೆರೆ ಬಳಿ ಪತ್ತೆಯಾಗಿದ್ದು ಇದರಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಈಗಾಗಲೇ ಅಗ್ನಿಶಾಮಕ ದಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವಿಪತ್ತು ನಿರ್ವಹಣಾ ಬೆಳಾಲು ಘಟಕದ ತಂಡದವರು ಶೋಧ ಕಾರ್ಯ ನಡೆಸುತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ. ಕಾರ್ಯಾಚರಣೆ ನಡೆಯುತ್ತಿದ್ದು ಸ್ಥಳದಲ್ಲಿ ಭಾರೀ ಜನ ಜಮಾವಣೆಗೊಂಡಿದ್ದಾರೆ.

You may also like

Leave a Comment