Home » Belthangady: ಸಾಕು ನಾಯಿ ಮೇಲೆ ದಾಳಿ ಮಾಡಿದ ಚಿರತೆ

Belthangady: ಸಾಕು ನಾಯಿ ಮೇಲೆ ದಾಳಿ ಮಾಡಿದ ಚಿರತೆ

0 comments

Belthangady: ನೆರಿಯ ಅಂಕೊತ್ಯಾರ್‌ನ ಸಿಜು ಎನ್ನುವವರ ಮನೆಯಂಗಳಕ್ಕೆ ಇಂದು ಚಿರತೆಯೊಂದು ಬಂದಿದ್ದು, ಸಾಕು ನಾಯಿ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಜೂನ್‌ 24 (ಇಂದು) ಮುಂಜಾನೆಯ ಸಮಯ ಸುಮಾರು 3.30 ರ ಹೊತ್ತಿಗೆ ನಡೆದಿದೆ.

ನಾಯಿಯ ಬೊಬ್ಬೆ ಕೇಳಿ ಎಚ್ಚರಗೊಂಡ ಮನೆಮಂದಿ ಹೊರಗೆ ಬಂದು ನೋಡಿದಾಗ ನಾಯಿಯನ್ನು ಗಾಯಮಾಡಿ ಚಿರತೆ ಸಮೀಪದ ಅರಣ್ಯದತ್ತ ಹೋಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆಯ ನೆರಿಯ ಶಾಖೆಯ ಡಿಆರ್‌ಎಫ್‌ಒ ರವಿಚಂದ್ರ, ಚಿಬಿದ್ರೆ ಶಾಖೆಯ ಡಿಆರ್‌ಎಫ್‌ಒ ನಾಗೇಶ್‌ ಹಾಗೂ ಪಂಚಾಯತ್‌ ಸದಸ್ಯರು ಭೇಟಿ ನೀಡಿದ್ದು, ಸ್ಥಳದಲ್ಲಿ ಬೋನು ಅಳವಡಿಕೆ ಮಾಡುವುದಾಗಿ ಅರಣ್ಯ ಇಲಾಖೆ ತಿಳಿಸಿದೆ.

You may also like