Home » Home ಹೊಸ ಕನ್ನಡ » ಬೆಳ್ತಂಗಡಿ: ಮತ್ತೆ ಕಾಣಿಸಿಕೊಂಡ ಚಿರತೆ: ಜನರಲ್ಲಿ ಭಯದ ವಾತಾವರಣ

ಬೆಳ್ತಂಗಡಿ: ಮತ್ತೆ ಕಾಣಿಸಿಕೊಂಡ ಚಿರತೆ: ಜನರಲ್ಲಿ ಭಯದ ವಾತಾವರಣ

A+A-
Reset

ಬೆಳ್ತಂಗಡಿ: ತಾಲೂಕಿನಲ್ಲಿ ಚಿರತೆ ಹಾವಳಿ ಮುಂದುವರಿದಿದ್ದು, ಜ.18 ರ ತಡ ರಾತ್ರಿ ನಡ ಕನ್ಯಾಡಿಯಲ್ಲಿ ರಸ್ತೆ ಬದಿಯಲ್ಲಿ ಚಿರತೆಯೊಂದು ಕಂಡು ಬಂದಿದೆ. ಇದರಿಂದ ಜನರು ಭಯಭೀತರಾಗಿದ್ದು, ಹೊರಗೆ ಬರಲು ಚಿಂತಿಸುವಂತಾಗಿದೆ.

ಕನ್ಯಾಡಿ ಪರಿಸರದಲ್ಲಿ ಚಿರತೆಯ ಓಡಾಟ ಮತ್ತಷ್ಟು ಹೆಚ್ಚಿದ್ದು, ನಡ ಗ್ರಾಮದ ಕನ್ಯಾಡಿಯಲ್ಲಿ ಜ.18 ರಂದು ಬೆಳಿಗ್ಗೆ ಸಾಕುನಾಯಿಯನ್ನು ಚಿರತೆ ಕೊಂಡೊಯ್ದ ಪ್ರಕರಣ ನಡೆದಿದೆ. ಮಲವಂತಿಗೆ ಗ್ರಾಮದ ದಿಡುಪಿ-ಪರಂಬೇರು ರಸ್ತೆಯ ಕರಿಯಂದೂರು ಕ್ರಾಸ್‌ ಬಳಿ ಸಂಜೆ ಸ್ಥಳೀಯರಿಗೆ ಚಿರತೆ ಕಂಡಿದೆ. ಚಿರತೆಯ ಓಡಾಟ ಪರಿಸರದಲ್ಲಿ ಹೆಚ್ಚಾಗಿದ್ದು, ಜನರು ಭಯದಲ್ಲಿ ಜೀವಿಸುವಂತಾಗಿದೆ.