Home » Belthangady: ಸ್ನೇಹಿತನ ಪತ್ನಿಯ ಮೊಬೈಲ್‌ ಫೋನ್‌ ಕದ್ದು ಹಣ ವರ್ಗಾವಣೆ; ಪೊಲೀಸ್‌ ಮೆಟ್ಟಿಲೇರಿದ ಮಹಿಳೆ!!!

Belthangady: ಸ್ನೇಹಿತನ ಪತ್ನಿಯ ಮೊಬೈಲ್‌ ಫೋನ್‌ ಕದ್ದು ಹಣ ವರ್ಗಾವಣೆ; ಪೊಲೀಸ್‌ ಮೆಟ್ಟಿಲೇರಿದ ಮಹಿಳೆ!!!

1 comment
Belthangady

Belthangady: ಮಹಿಳೆಯೊಬ್ಬರ ಮೊಬೈಲ್‌ ಫೋನ್‌ ಕದ್ದು ಅದರಿಂದ ಹಣ ವರ್ಗಾವಣೆ ಮಾಡಿ, ಮೋಸ ಮಾಡಿದ ಘಟನೆಯ ಕುರಿತು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ನಡೆದಿದೆ.

ಅಭಿದಾ ಬಾನು, ಬೆಳ್ತಂಗಡಿ ಕುವೆಟ್ಟು ನಿವಾಸಿಯಾಗಿದ್ದು ಇವರ ದೂರು ನೀಡಿದ್ದಾರೆ. ಸಿದ್ದಿಕ್‌ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಈ ಘಟನೆ ನ.9 ರಂದು ನಡೆದಿದ್ದು, ಮಹಿಳೆಯು ಮನೆಯಲ್ಲಿ ಇರದ ಸಮಯದಲ್ಲಿ, ಪರಿಚಯದ ಸಿದ್ದಿಕ್‌ ಎಂಬಾತ ಮಹಿಳೆಯ ಮನೆಯಿಂದ ಅಂದಾಜು ಎಂಟು ಸಾವಿರ ಮೌಲ್ಯದ ಮೊಬೈಲನ್ನು ಕಳವು ಮಾಡಿಕೊಂಡು ಹೋಗಿದ್ದು, ನಂತರ ಪೋನ್‌ ಪೇ ಮುಖಾತರ ಖಾತೆಯಲ್ಲಿದ್ದ 64 ಸಾವಿರ ಹಣದ ಪೈಕಿ 34 ಸಾವಿರ ಹಣವನ್ನು ಜಾಪರ್‌ ಎಂಬಾತನಿಗೂ, 25 ಸಾವಿರನ್ನು ಮಹಮ್ಮದ್‌ ಎಂಬಾತನಿಗೂ ಹಾಗೂ 2000 ರೂ. ನ್ನು ಸಿರಾಜ್‌ ಎಂಬಾತನಿಗೆ ವರ್ಗಾವಣೆ ಮಾಡಿರುವುದಾಗಿ ವರದಿಯಾಗಿದೆ.

ಇವರೆಲ್ಲ ಮಹಿಳೆಯ ಗಂಡನ ಸ್ನೇಹಿತರಾಗಿದ್ದು, ಮೊಬೈಲ್‌, ಹಣ ವಾಪಸ್‌ ನೀಡುತ್ತಾರೆಂದು ಇಲ್ಲಿಯವರೆಗೆ ಕಾದಿದ್ದು, ಈವರೆಗೆ ವಾಪಾಸು ನೀಡಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಅಕ್ರ ನಂ 116/2023 ಕಲಂ; 380, 411 ಭಾ ದಂ ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಇದನ್ನು ಓದಿ: ಪ್ರತಾಪ್​ಗೂ ಉಲ್ಟ ಹೊಡೆದ ಸಂಗೀತ! ಚಮಚ ಪಾರ್ಟ್​ 2 ಅಂತಿದ್ದಾರೆ ನೆಟ್ಟಿಗರು

You may also like

Leave a Comment