

ಬೆಳ್ತಂಗಡಿ: ಸಂತೆಕಟ್ಟೆ ಜೆ.ಎಮ್ ಕಾಂಪ್ಲೆಕ್ಸ್ ನಲ್ಲಿ ಯೇಸುದಾಸ್ ಮಾಲಿಕತ್ವದ ಆನ್ ಫಿಟ್ ಮಲ್ಟಿ ಜಿಮ್ ಜ.26ರಂದು ಶುಭಾರಂಭಗೊಂಡಿದೆ. ನೂತನ ಸಂಸ್ಥೆಯ ಉದ್ಘಾಟನೆಯನ್ನು ಚಿನ್ನದ ಪದಕ ವಿಜೇತ ಸಿರಿಲ್ ಜೋಸೆಫ್ ಹಾಗೂ ವ್ಯಾಯಾಮ ತರಬೇತಿದಾರ ನಿತಿನ್ ವರ್ಗೀಸ್ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ನಿತಿನ್ ವರ್ಗೀಸ್ ಆರೋಗ್ಯ ಚೆನ್ನಾಗಿ ಇರಬೇಕಾದರೆ ದಿನನಿತ್ಯ ನಾವು ವ್ಯಾಯಾಮ ಮಾಡಬೇಕು. ವ್ಯಾಯಾಮವನ್ನು ದಿನನಿತ್ಯದ ಚಟುವಟಿಕೆಯಾಗಿ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲಕರಾದ ಡೈನಾ ಮತ್ತು ಯೇಸುದಾಸ್, ಬೆಳ್ತಂಗಡಿ ಚರ್ಚ್ ನ ಧರ್ಮಗುರು ಫಾ.ವಾಲ್ಟರ್ ಡಿಮೆಲ್ಲೊ, ಆನ್ ಫಿಟ್ ಮಲ್ಟಿ ಜಿಮ್ ತರಬೇತಿದಾರ ರಾಜೇಶ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.













