Belthangady: ಮೇ 12 ರಂದು ನಡೆದಿದ್ದ ಸಭಾ ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಮುಸ್ಲಿಂ ಸಮುದಾಯದ ಅವಹೇಳನ ಮಾಡಿದ ವಿಡಿಯೋ ವೈರಲ್ ಬೆನ್ನಲ್ಲೇ ಬೆಳ್ತಂಗಡಿ ಪೊಲೀಸ್ ಠಾಣೆಗೆ ಸಾಮಾಜಿಕ ಕಾರ್ಯಕರ್ತ ಇರುವರ್ತಾಯ ಅವರು ದೂರು ನೀಡಿದ್ದಾರೆ.
ಖಾಸಗಿ ಸಂಘಟನೆಯ ವತಿಯಿಂದ ನಡೆದ ಸುಹಾಸ್ ಶೆಟ್ಟಿಗೆ ನುಡಿನಮನ ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಗುರುವಾಯನಕೆರೆಯಲ್ಲಿ ಮುಸ್ಲಿಂರ ಸಂಖ್ಯೆ ಜಾಸ್ತಿ, ಮುಸ್ಲಿಂರೊಂದಿಗೆ ವ್ಯಾಪಾರ ವ್ಯವಹಾರ ಮಾಡುವುದನ್ನು ನಿಲ್ಲಿಸಬೇಕು. ಇದನ್ನು ಬಹಿಷ್ಕರಿಸಬೇಕು. ಬೆಳಗ್ಗೆ ಬೇಗ ಮುಸ್ಲಿಂ ರಿಕ್ಷಾ ಚಾಲಕರು ಬರುವುದು, ನಮ್ಮಲ್ಲಿ ಚಂದ ಮಾತನಾಡಿ ನಮಗೆ ಗೊತ್ತಿಲ್ಲದೆ ನಮ್ಮನ್ನು ಮೋಸ ಮಾಡುತ್ತಾರೆಂದು ತುಳು ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
ಇದು ಸಮಾಜದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಧರ್ಮ ಧರ್ಮಗಳ ಮಧ್ಯೆ ಕೋಮು ಸಂಘರ್ಷ ಸೃಷ್ಟಿಸುವ ಉದ್ದೇಶದಿಂದ ಮುಸ್ಲಿಂ ಸಮುದಾಯವನ್ನು ಅವಹೇಳನಕಾರಿಯಾಗಿ ಬಿಂಬಿಸಿ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಕಂಡು ಮೇ 14 ರಂದು ದೂರು ನೀಡಲಾಗಿದೆ.
