Home » ಬೆಳ್ತಂಗಡಿ:ತೋಟತ್ತಾಡಿ ಸೋಮನಾಥೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳ್ಳತನ

ಬೆಳ್ತಂಗಡಿ:ತೋಟತ್ತಾಡಿ ಸೋಮನಾಥೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳ್ಳತನ

0 comments

ಬೆಳ್ತಂಗಡಿ :ಬೀಗ ಮುರಿದು ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳರು ಕಳವು ಮಾಡಿದ ಘಟನೆ ತೋಟತ್ತಾಡಿ ಇತಿಹಾಸ ಪ್ರಸಿದ್ದ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆದಿದ್ದು,ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ದೇವಾಲಯದಲ್ಲಿ ಕಳವು ಮಾಡಿದ ಕಳ್ಳರು ಪಕ್ಕದಲ್ಲಿರುವ ಬೈರಿಂತ ಶ್ರೀ ಸೋಮನಾಥೇಶ್ವರ ಭಜನಾ ಮಂದಿರದ ಬೀಗ ಮುರಿದು ಒಳ ಹೋಗಿ ಕಾಣಿಕೆ ಹುಂಡಿಯನ್ನು ಮುರಿದಿದ್ದಾರೆ.ಮಂದಿರದ
ಮುಖ್ಯದ್ವಾರದ ಮರದ ಬಾಗಿಲನ್ನು ಮುರಿದು ಒಳ ಪ್ರವೇಶಿಸಿದ್ದಾರೆ ಎಂದು ದೇವಸ್ಥಾನದವರು ಮಾಹಿತಿ ನೀಡಿದ್ದಾರೆ.

ಶ್ರೀ ಸೋಮನಾಥೇಶ್ವರ ದೇವಸ್ಥಾನವು ಊರವರ ಸಂಪೂರ್ಣ ಸಹಕಾರದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ಈಗ ದೇವರನ್ನು
ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ.ಬಾಲಾಲಯದಲ್ಲಿ ಇರಿಸಿದ್ದ
ಕಾಣಿಕೆ ಹುಂಡಿಯಿಂದ ನಾಲ್ಕು ತಿಂಗಳ ಕಾಣಿಕೆ ಹಣವು ಕಳವಾಗಿದೆ.ಈ ಬಗ್ಗೆ ಧರ್ಮಸ್ಥಳ ಆರಕ್ಷಕ ಠಾಣೆಯಲ್ಲಿ ದೂರು ನೀಡಲಾಗಿದ್ದು,ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

You may also like

Leave a Comment