4

Belthangady: ಪಡಂಗಡಿ ಗ್ರಾಮದ ಓಡೀಲು ಎಂಬಲ್ಲಿ ದಿನಸಿ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ಕಳ್ಳತನ ಮಾಡಿರುವ ಘಟನೆಯೊಂದು ನಡೆದಿದೆ. ಹರೀಶ್ ಕುಲಾಲ ಎಂಬುವರಿಗೆ ಸೇರಿದ ದಿನಸಿ ಅಂಗಡಿ ಇದಾಗಿದ್ದು, ನಿನ್ನೆ (ಫೆ.10,ಸೋಮವಾರ) ರಾತ್ರಿ ಕಳ್ಳರು ನುಗ್ಗಿ ಹಲವಾರು ವಸ್ತುಗಳನ್ನು ಕದ್ದಿದ್ದಾರೆ.




ಇಂದು ಮುಂಜಾನೆ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳರು ಬೀಗ ಮುರಿದು, ಶಟರ್ ತೆರೆದು ಒಳನುಗ್ಗಿ ಕಳ್ಳತನ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಂಗಡಿಯಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಕೃತ್ಯದ ಕುರಿತು ಹೆಚ್ಚಿನ ಮಾಹಿತಿ ಇನ್ನು ತಿಳಿದು ಬರಬೇಕಿದೆ.
