ಉಲ್ಕಾಪಾತ ದ ಬಗ್ಗೆ ನಾವು ಕೇಳಿರಬಹುದು ಆದರೆ ನಾವು ನೋಡಿರಲು ಸಾಧ್ಯವಿಲ್ಲ. ನಿಮಗೊಂದು ಉತ್ತಮ ಅವಕಾಶ ಇಲ್ಲಿದೆ. ಹೌದು ಬೆಂಗಳೂರಿಗರು ಅದ್ಭುತವಾದ ಉಲ್ಕಾಪಾತವನ್ನು ವೀಕ್ಷಿಸಬಹುದು! ಮಾಹಿತಿ ಪ್ರಕಾರ ಭೂಮಿಯು ಧೂಳು ಅಥವಾ ಉಲ್ಕಾಶಿಲೆಗಳ ಮೂಲಕ ಹಾದುಹೋದಾದ ಆಕಾಶದಲ್ಲಿ ಈ ಉಲ್ಕಾಪಾತವು ಸಂಭವಿಸುತ್ತದೆ ಎನ್ನಲಾಗಿದೆ.
ಸದ್ಯ ಜವಾಹರಲಾಲ್ ನೆಹರು ತಾರಾಲಯವು ಡಿಸೆಂಬರ್ 13 ರಂದು ಉಲ್ಕಾಪಾತ ವೀಕ್ಷಿಸಲು ವಿಶೇಷ ವ್ಯವಸ್ಥೆ ಮಾಡಿದೆ. ಡಿಸೆಂಬರ್ 13 ರ ರಾತ್ರಿಯಿಂದ ಡಿಸೆಂಬರ್ 14 ರ ಮುಂಜಾನೆಯವರೆಗೆ ಭೂಮಿಯ ಮೇಲೆ ಗೋಚರಿಸುವ ಪ್ರಕಾಶಮಾನವಾದ ಉಲ್ಕಾಪಾತ ಸಂಭವಿಸಲಿದೆ ಎಂಬ ಮಾಹಿತಿ ಇದೆ.
ಹೌದು ಡಿಸೆಂಬರ್ 13ರ ಮಧ್ಯರಾತ್ರಿ 2 ಗಂಟೆಯಿಂದ 3 ಗಂಟೆಯವರೆಗೆ ಉಲ್ಕಾಪಾತವು ಅತ್ಯಂತ ಹೆಚ್ಚಾಗಿ ಆಗುವ ಸಾಧ್ಯತೆಯಿದೆ ಎಂಬ ಮಾಹಿತಿ ದೊರೆತಿದೆ. ಸದ್ಯ ಈ ಅವಧಿಯಲ್ಲಿ ನೂರಕ್ಕೂ ಹೆಚ್ಚು ಉಲ್ಕೆಗಳು ಭೂಮಿಯತ್ತ ಅಪ್ಪಳಿಸುವ ಸಾದ್ಯತೆಯಿದೆ. ವಿಶೇಷ ಏನೆಂದರೆ ಈ ಉಲ್ಕಾಪಾತವನ್ನು ಕೇವಲ ಬರಿಗಣ್ಣಿನಿಂದಲೇ ನೀವು ವೀಕ್ಷಿಸಬಹುದಾಗಿದೆ.
ಸಂಶೋಧಕರ ಅಧ್ಯಯನ ಮಾಹಿತಿ ಪ್ರಕಾರ ಈ ಉಲ್ಕಾಪಾತವನ್ನು ವೀಕ್ಷಣೆ ಮಾಡುವ ಸಲುವಾಗಿ ಮಾಹಿತಿ ನೀಡಲಾಗಿದ್ದು ಜನರಿಗೆ ಇದೊಂದು ಉತ್ತಮ ಅವಕಾಶ ಆಗಿದೆ.
