Bengaluru : ಪಟಾಕಿ ಸಿಡಿದಿದ್ದಕ್ಕೆ ಬಾಂಬ್ ಎಂದು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಭಯಗೊಂಡು ಓಡಿದ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ.
ದೆಹಲಿಯ ಕೆಂಪು ಕೋಟೆ ಬಳಿ ಕಾರು ಬ್ಲಾಸ್ಟ್ ಆಗಿ ಎಂಟು ಮಂದಿ ಸಾವನ್ನಪ್ಪಿದು ಅನೇಕರು ಗಾಯಗೊಂಡಿದ್ದಾರೆ. ಈ ಬೆನ್ನಲ್ಲೇ ದೇಶಾದ್ಯಂತ ಕಟ್ಟೇಚ್ಚರವನ್ನು ವಹಿಸಲಾಗಿದೆ. ಇದರ ನಡುವೆಯೇ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯಲ್ಲಿ ಪಟಾಕಿ ಒಂದು ಸಿಡಿದಿದ್ದು, ಬಾಂಬ್ ಬ್ಲಾಸ್ಟ್ ಆಯ್ತು ಎಂದುಕೊಂಡು ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಅಂದಹಾಗೆ ನಿನ್ನೆ ಬೆಳಿಗ್ಗೆ ಶೌಚಾಲಯದಲ್ಲಿ ಕೆಲವು ವಿದ್ಯಾರ್ಥಿಗಳು ಪಟಾಕಿ ಇಟ್ಟಿದ್ದಾರೆ. ಪಟಾಕಿ ಬ್ಲಾಸ್ಟ್ ಶಬ್ದ ಕೇಳಿ ವಿದ್ಯಾರ್ಥಿಗಳು ಮತ್ತು ಸ್ಥಳೀಯ ನಿವಾಸಿಗಳು ಭಯಗೊಂಡಿದ್ದಾರೆ. ಶಾಲಾ ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ ಇದು ಪಟಾಕಿ ಎಂದು ಬೆಳಕಿಗೆ ಬಂದಿದೆ.ಸದ್ಯ ಪೊಲೀಸರು ಶಾಲಾ ಆಡಳಿತ ಮಂಡಳಿ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
