Home » Bengaluru honeytrap racket: ಬಾಗಿಲು ತೆರೆದ ತಕ್ಷಣ ತಬ್ಬಿಕೊಳ್ಳುವ ಬಿಕಿನಿ ಹುಡುಗಿ – ಇದು ಹನಿ ಟ್ರಾಪ್’ನ ಹೊಸ ಕಹಾನಿ !

Bengaluru honeytrap racket: ಬಾಗಿಲು ತೆರೆದ ತಕ್ಷಣ ತಬ್ಬಿಕೊಳ್ಳುವ ಬಿಕಿನಿ ಹುಡುಗಿ – ಇದು ಹನಿ ಟ್ರಾಪ್’ನ ಹೊಸ ಕಹಾನಿ !

by ಹೊಸಕನ್ನಡ
0 comments

Bengaluru honeytrap racket: ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈಯ ಖತರ್ನಾಕ್ ಮಾಡೆಲ್ ಕಮ್ ಬಿಕಿನಿ ಬೇಬ್ಸ್ ಅನ್ನು ಪುಟ್ಟೇನಹಳ್ಳಿಯ ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಆರೋಪಿಗಳಾದ ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್, ಯಾಸಿನ್ ಎಂಬುವರನ್ನು ಈ ಮೊದಲೇ ಬಂಧಿಸಲಾಗಿದೆ. ಇವರು ನೀಡಿರುವ ಮಾಹಿತಿಯನ್ವಯ ನೇಹಾಳನ್ನು ಬಂಧಿಸಲಾಗಿದೆ.

ನೇಹಾ ಅಲಿಯಾಸ್ ಮೆಹರ್ ಬಂಧಿತ ಆರೋಪಿತೆ. ನೇಹಾಳನ್ನು ಮುಂಬೈನಲ್ಲಿ ಬಂಧಿಸಿರುವ ಪುಟ್ಟೇನಹಳ್ಳಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಹನಿಟ್ರ್ಯಾಪ್ ಜಾಲಕ್ಕೆ ಕೆಡವಲು ಆರೋಪಿಗಳು ‘ಕತ್ನಾ’ ಅಸ್ತ್ರ ಪ್ರಯೋಗ ಮಾಡುತ್ತಿದ್ದರು. ಆ ಮೂಲಕ ಲಕ್ಷಾಂತರ ರೂಪಾಯಿ ದುಡಿಯುತ್ತಿದ್ದರು. ಅವರು ಇಷ್ಟೆಲ್ಲ ದುಡಿಯಲು ಹೂಡುತ್ತಿದ್ದ ಬಂಡವಾಳ ಏನು ಗೊತ್ತೆ ? ಕೇವಲ ಒಂದು ಜೊತೆ ಬಿಕಿನಿಗಳು !

ಹೌದು ಒಂದು ಜೊತೆ ಬಿಕಿನಿಗಳೆ ಅವರ ಬಂಡವಾಳ. ನೇಹಾ ಎಂಬ ಬಾಂಬೆ ಹುಡುಗಿ, ಟೆಲಿಗ್ರಾಮ್ ಮೂಲಕ ಹಲವರ ಸಂಪರ್ಕ ಸಾಧಿಸಿಕೊಂಡು ಹನಿಟ್ರ್ಯಾಪ್ ಬಲೆಗೆ ಕೆಡವಲು ಹಲವರನ್ನು ಸಂಪರ್ಕಿಸುತ್ತಿದ್ದಳು. ಬಳಿಕ ತನ್ನ ವಯ್ಯಾರ ಮತ್ತು ಬಣ್ಣದ ಮಾತುಗಳಿಂದ ಅವರನ್ನು ಮರಳು ಮಾಡುತ್ತಿದ್ದಳು. ನೋಡಲು ಆಕೆ ಸುಂದರಿ. ಕೆಂಪನೆಯ ಚರ್ಮ, ಮತ್ತು ಇಳಿಬಿಟ್ಟ ಹೊಳೆಯುವ ಕೂದಲುಗಳು. ಇನ್ನೇನು ಬೇಕು ? ಬಲೆ ಹಾಕದೆಯೇ ಬಲಿಗಳು ಬಿಲಕ್ಕೆ ಬಂದು ಬೀಳುತ್ತಿದ್ದವು ! ಹಾಗೆ ಬರುವವರನ್ನು ಆಕೆ ಸ್ವಾಗತಿಸುವ ವಿಧಾನವೇ ವಿಶಿಷ್ಟವಾಗಿತ್ತು.

ಈ ರೀತಿ ಮಾಂಸದ ವಾಸನೆ ಗ್ರಹಿಸಿಕೊಂಡು, ಲೈಂಗಿಕ ಕ್ರಿಯೆಗೆಂದು ಮನೆಯೊಂದಕ್ಕೆ ಮಿಕಗಳು ಕಂಕುಳ ತುಂಬ ಸೆಂಟು ಒರೆಸಿಕೊಂಡು ಬರುತ್ತಿದ್ದರು. ಆಕೆಯ ಮಾತನ್ನು ನಂಬಿದ ಸಂತ್ರಸ್ತರು ಜೆಪಿ ನಗರದ ಐದನೇ ಹಂತದಲ್ಲಿರುವ ಮನೆಗೆ ಸೀದಾ ನಡೆದು ಬರುತ್ತಿದ್ದರು. ಮನೆಯ ಬೆಲ್ ಮಾಡುತ್ತಿದ್ದಂತೆ ಈ ಸುಂದರಿ ಸ್ವತಃ ಬಾಗಿಲು ತೆರೆದು ಆಹ್ವಾನಿಸಿ ಬಿಡುತ್ತಿದ್ದಳು. ಆಕೆಯನ್ನು ಕಂಡ ಆಗಂತುಕ ತಕ್ಷಣಕ್ಕೆ ಆನಂದ ತುಂದಿಲ. ಯಾಕೆಂದರೆ ಆಕೆ ಕೇವಲ ಬಿಕಿನಿಯಲ್ಲಿಯೇ ಅವರ ಮುಂದೆ ಸ್ವಾಗತಕ್ಕೆ ನಿಂತು ಬಿಡುತ್ತಿದ್ದಳು.

ಈಕೆಯ ಲೈಂಗಿಕ ಸುಖಕ್ಕಾಗಿ ಹಾತೊರೆದು ಬರುವವರನ್ನು ಬಾಗಿಲು ತೆರೆದ ತಕ್ಷಣ ಬಿಕಿನಿಯಲ್ಲೇ ಒಮ್ಮೆ ತಬ್ಬಿಕೊಂಡು ಆಗ ಸ್ವಾಗತಿಸಿದ ಮೇಲೆ ಕೇಳಬೇಕೆ ? ಬಳಿಕ ಆಕೆಯೊಂದಿಗೆ ನಡೆಯುತ್ತಿತ್ತು ಒಂದಷ್ಟು ಓರಲ್ ರಂಗಿನಾಟದ ಹಸಿಬಿಸಿ ಆಟಗಳು. ಅದು ಇನ್ನೊಂದು ಹಂತಕ್ಕೆ ಹೋಗುವ ಮೊದಲು ಆಕೆ ಒಮ್ಮೆ ಮೊಬೈಲ್ ಎತ್ತಿಕೊಳ್ಳುತ್ತಿದ್ದಳು, ಏನೋ ನೋಡುವ ನೆಪದಲ್ಲಿ ಹೋಗುತ್ತಿತ್ತು ಒಂದು ಸಣ್ಣ ಮೆಸೇಜ್. ವಿಟ ಪುರುಷರು ಈಕೆಯ ಮನೆ ಪ್ರವೇಶಿಸಿದ ಮೂರೇ ನಿಮಿಷಕ್ಕೆ, ಆಕೆ ಸಿಗ್ನಲ್ ಕೊಟ್ಟ ಕೆಲವೇ ಸೆಕುಂಡ್ ಗಳಲ್ಲಿ ಉಳಿದ ಆರೋಪಿಗಳು ಅಲ್ಲಿಗೆ ಪ್ರತ್ಯಕ್ಷ. ಯಥಾ ಪ್ರಕಾರ ಸಣ್ಣ ಗದ್ದಲ, ಬೆದರಿಕೆ ಇತ್ಯಾದಿ ಇತ್ಯಾದಿ. ಜತೆಗೆ ಅಲ್ಲಿ ಆಕೆ ಬಾಗಿಲು ತೆಗೆಯುವಲ್ಲಿಂದ ಇಲ್ಲಿಯ ತನಕ ನಡೆದ ಎಲ್ಲಾ ಬಿಕಿನಿ ಹುಡುಗಿಯ ಜತೆಗಿದ್ದ ಹಸಿಬಿಸಿ ದೃಶ್ಯವನ್ನು ಮೊಬೈಲ್ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದರು. ಇದೆಲ್ಲ ಮಾಡುವುದಕ್ಕೂ ಮುನ್ನ ಸಂತ್ರಸ್ತರ ಮೊಬೈಲ್ ಕಸಿದುಕೊಳ್ಳುತ್ತಾರೆ ಮತ್ತು ಮೊಬೈಲ್ನಲ್ಲಿರುವ ಎಲ್ಲ ನಂಬರ್ ಅನ್ನು ನೋಟ್ ಮಾಡಿಕೊಳ್ಳುತ್ತಾರೆ.

ಇಷ್ಟೆಲ್ಲಾ ಆದ ಬಳಿಕ ವಿಡಿಯೋ ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಣ ಕೊಡದಿದ್ದರೆ ವಿಡಿಯೋವನ್ನು ಸ್ನೇಹಿತರು, ಸಂಬಂಧಿಕರು ಹಾಗೂ ಕುಟುಂಬಸ್ಥರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ಅಲ್ಲದೇ ಯುವತಿ ಮುಸ್ಲಿಂ ಆಗಿದ್ದಾಳೆ. ಆಕೆಯನ್ನು ಮದುವೆ ಆಗುವಂತೆ ಡ್ರಾಮಾ ಮಾಡುತ್ತಿದ್ದರು. ಮದುವೆ ಆಗಬೇಕಾದರೆ ‘ಕಾ ‘ ಮಾಡಿಸಬೇಕು ಎಂದು ಧಮ್ಮಿ ಹಾಕಿ, ಮುಸ್ಲಿಂ ಆಗಿ ಕನ್ವರ್ಟ್ ಆಗು ಮೊದಲು, ಮದುವೆ ಮಾಡೋಣ ಎಂದು ಬೆದರಿಕೆ ಹಾಕುತ್ತಿದ್ದರು. ಮರ್ಯಾದಿ ಹೋಗುವ ಭಯದಿಂದ ವ್ಯಕ್ತಿಗಳು ಕುಸಿದು ಹೋಗಿ ಕೇಳಿದ್ದನ್ನು ಕೊಟ್ಟು ಕಳಚಿಕೊಳ್ಳಲು ಯೋಚಿಸುವಂತೆ ಈ ಖತರ್ನಾಕ್ ಗುಂಪು ಪ್ಲಾನ್ ಮಾಡುತ್ತಿತ್ತು. ಹೆಚ್ಚಿನವರು ಮತ್ತೆ ಮತ್ತೆ ಹಣ ಕಕ್ಕಿ ಮಾನ ಉಳಿಸಿಕೊಳ್ಳುವ ಪ್ಲಾನ್ ಮಾಡುತ್ತಿದ್ದರು.

ಇಲ್ಲಿ ಕೂಡಾ ಹೆದರಿ ಹಣ ವರ್ಗಾವಣೆ ಮಾಡಿದ ಸಂತ್ರಸ್ತ, ಮತ್ತಷ್ಟು ಹಣಕ್ಕೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈ ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಸದ್ಯಕ್ಕೆ ಬಂಧಿಸಲಾಗಿದೆ. ಇದೇ ರೀತಿ ಈ ಬಿಕಿನಿ ಗ್ರಾಂಗ್ 12 ಕ್ಕೂ ಹೆಚ್ಚು ಜನರಿಗೆ ಹನಿಟ್ರ್ಯಾಪ್ ಮಾಡಿರೋದು ಬೆಳಕಿಗೆ ಬಂದಿದೆ. ಈ ತನಕ ಒಟ್ಟು 30 ಲಕ್ಷಕ್ಕೂ ಹೆಚ್ಚು ಹಣವನ್ನು ತಮ್ಮ ವರ್ಗಾಯಿಸಿಕೊಂಡಿರುವುದಾಗಿ ತಿಳಿದುಬಂದಿದ್ದು, ಪುಟ್ಟೇನಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದಿದೆ.

You may also like