Home » Bengaluru Kambala: ಬೆಂಗಳೂರಲ್ಲಿ ಈ ಬಾರಿ ಕಂಬಳ ನಡೆಯೋದಿಲ್ವಂತೆ: ಸಿಲಿಕಾನ್‌ ಸಿಟಿ ಜನರಿಗೆ ಭಾರೀ ನಿರಾಸೆ! ಕಾರಣ ಏನು?

Bengaluru Kambala: ಬೆಂಗಳೂರಲ್ಲಿ ಈ ಬಾರಿ ಕಂಬಳ ನಡೆಯೋದಿಲ್ವಂತೆ: ಸಿಲಿಕಾನ್‌ ಸಿಟಿ ಜನರಿಗೆ ಭಾರೀ ನಿರಾಸೆ! ಕಾರಣ ಏನು?

0 comments

Bengaluru Kambala: ತುಳುನಾಡ(Tulunadu) ಜನಪದ ಕ್ರೀಡೆ ಕಾಂತಾರ(Kantara) ಸಿನಿಮಾ ನಂತರ ಕೇವಲ ತುಳುನಾಡಿಗೆ ಸೀಮಮಿತವಾಗದೆ ರಾಜ್ಯ, ದೇಶ, ವಿದೇಶದಲ್ಲೂ ಜನಜನಿತವಾಗಿದೆ. ಮಳೆಗಾಲ(Rain season) ನಿಲ್ಲುವ ಕಾಲಕ್ಕೆ ಕಂಬಳ ಋತು ಆರಂಭವಾಗಲಿದೆ. ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಬಾರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ(Bengaluru) ಮೊದಲ ಕಂಬಳ‌ ನಡೆಸುವುದಾಗಿ ಕಂಬಳ ಸಮಿತಿ ಹೇಳಿತ್ತು. ಆದರೆ ಯಾಕೋ ಈ ಬಾರಿ ಬೆಂಗಳೂರಲ್ಲಿ ಕಂಬಳ ನಡೆಯೋದೇ ಡೌಟ್ ಅನ್ನೋ ಮಾತು ಕೇಳಿಬರುತ್ತಿದೆ.

ಬೆಂಗಳೂರು ಕಂಬಳಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಬೆಂಗಳುರು ಕಂಬಳ ಅಂದರೆ ನಮ್ಮ ತುಳುನಾಡಿನಲ್ಲಿ ನಡೆಸಿದಂತೆ ಅಲ್ಲ. ಅಲ್ಲಿ ಅದರದ್ದೇ ಆದ ತಯಾರಿಗಳು ಬೇಕು. ಆದರೆ ಇಲ್ಲಿ ಈ ವರೆಗೆ ಯಾವುದೇ ಪೂರ್ವ ತಯಾರಿ ಆಗಿಲ್ಲ. ಬೆಂಗಳೂರಿನಲ್ಲಿ ಅಷ್ಟು ಸುಲಭವಾಗಿ ಕಂಬಳ ನಡೆಸೋದು ಕಷ್ಟ. ಹಾಗಾಗಿ ಸಮಿತಿ ಕಂಬಳ ಈ ಬಾರಿ ಕಂಬಳ ನಡೆಸದಿರುವ ಬಗ್ಗೆ ಚಿಂತನೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಕಂಬಳ ತಯಾರಿ 3 ತಿಂಗಳ ಪ್ರಕ್ರಿಯೆ:
ಇತಿಹಾಸದಲ್ಲೇ ಮೊದಲ ಬಾರಿಗೆ ತುಳುನಾಡ ಜಾನಪದ ಕ್ರೀಡೆಯನ್ನು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಸಲಾಗಿತ್ತು. ಈ ವರ್ಷದ ಆರಂಭಿಕ ಪಂದ್ಯವನ್ನು ಬೆಂಗಳೂರಿನಿಂದಲೇ ಅ.26 ರಂದು ನಡೆಸಲು ಜಿಲ್ಲಾ ಕಂಬಳ ಸಮಿತಿ ನಿರ್ಧರಿಸಿತ್ತು. ಆದರೆ ಬೆಂಗಳೂರು ಕಂಬಳ ಸಮಿತಿ ಮಾತ್ರ ಕ್ರೀಡೆಯ ತಯಾರಿಯನ್ನು ಮಾಡಿಲ್ಲ. ಅದಲ್ಲದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೈಸೂರು ಅರಮನೆ ಮತ್ತು ರಾಜ್ಯ ಸರ್ಕಾರದಿಂದ‌ ಅನುಮತಿ ಸಿಗಬೇಕಾದರೆ ಮೂರು ತಿಂಗಳ ಪ್ರಕ್ರಿಯೆ ಇದೆ.

ಯಾವುದೇ ತಯಾರಿ ಆಗಿಲ್ಲ
ಸಾಮಾನ್ಯವಾಗಿ ಕಂಬಳಗಳು ಗದ್ದೆಯಲ್ಲಿ ನಡೆಯುತ್ತವೆ. ಇದೀಗ ಕೆರೆಗಳ ನಿರ್ಮಾಣ ಸೇರಿದಂತೆ ಮೂಲಭೂತ ವ್ಯವಸ್ಥೆಗಳು ಮಾಡಲಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಅದ್ಯಾವುದೇ ತಯಾರಿಗಳು ನಡೆದಿಲ್ಲ. ಅಲ್ಲದೆ ಕಂಬಳದ ಕೋಣಗಳನ್ನು ಕರಾವಳಿಯಿಂದ ಬೆಂಗಳೂರಿಗೆ ಕರೆ ತರಬೇಕು. ಇದು ಸುಲಭದ ಕೆಲಸವಲ್ಲ. ಹಾಗೆ ಕೋಟ್ಯಾಂತರ ರೂಪಾಯಿ ಖರ್ಚು ವೆಚ್ಚವೂ ಇದೆ. ಆದರೆ ಈ ಬಾರಿ ಕಂಬಳ ಸಮಿತಿ ಈ ರೀತಿಯ ಯಾವುದೇ ತಯಾರಿಯನ್ನು ಮಾಡಿಕೊಂಡಿಲ್ಲ. ಹಾಗಾಗಿ ಬೆಂಗಳೂರು ಕಂಬಳ ಇನ್ನು ನಡೆಯೋದೇ ಡೌಟ್ ಅಂತ ಹೇಳಲಾಗುತ್ತಿದೆ.

ಮಾರ್ಚ್‌ನಲ್ಲಿ ನಡೆಯಬಹುದೇ ಕಂಬಳ?
ಆರಂಭಿಕವಾಗಿ ಬೆಂಗಳೂರಿನಲ್ಲಿ ಕಂಬಳ ನಡೆಸಲು ಅಸಾಧ್ಯ. ಆದರೆ, ಕಂಬಳ ಕೋಣಗಳ ಮಾಲೀಕರು ಒಪ್ಪಿದ್ರೆ, ಮಾರ್ಚ್ ನಲ್ಲಿ ನಡೆಸುತ್ತೇವೆ ಎಂದು ಬೆಂಗಳೂರು ಕಂಬಳ ಸಮಿತಿ ಹೇಳಿದೆ. ಈ ಬಗ್ಗೆ ಉಳಿದ ಕಂಬಳ ಸಮಿತಿ ಜೊತೆ ಮಾತುಕತೆ ನಡೆಸಿ ನಿರ್ಧಾರ ಪ್ರಕಟ ಮಾಡುತ್ತೇವೆ ಎಂದು ಬೆಂಗಳೂರು ಕಂಬಳ ಸಮಿತಿಯ ಪ್ರಮುಖರು ಮಾಹಿತಿ ನೀಡಿದ್ದಾರೆ.

You may also like

Leave a Comment