Home » Bengaluru: ಲಾಲ್‌ಬಾಗ್‌ ಪ್ರವೇಶ ದರ ಭಾರೀ ಹೆಚ್ಚಳ! ಪ್ರವಾಸಿಗರಿಗೆ ತೋಟಗಾರಿಕಾ ಇಲಾಖೆ ಶಾಕ್

Bengaluru: ಲಾಲ್‌ಬಾಗ್‌ ಪ್ರವೇಶ ದರ ಭಾರೀ ಹೆಚ್ಚಳ! ಪ್ರವಾಸಿಗರಿಗೆ ತೋಟಗಾರಿಕಾ ಇಲಾಖೆ ಶಾಕ್

0 comments

Bengaluru: ಕಣ್ಣು ಮತ್ತು ಮನಸಿಗೆ ಮುದ ನೀಡುವ ಬೆಂಗಳೂರಿನ (Bengaluru) ಲಾಲ್‌ಬಾಗ್‌ಗೆ (Lal bagh) ಭೇಟಿ ನೀಡುವ ಪ್ರವಾಸಿಗರಿಗೆ ತೋಟಗಾರಿಕಾ ಇಲಾಖೆ (Horticulture Department) ಶಾಕ್‌ ನೀಡಿದ್ದು, ಲಾಲ್ ಬಾಗ್ ಪ್ರವೇಶ ದರವನ್ನು (Ticket Price) ಭಾರೀ ಏರಿಕೆ ಮಾಡಿದೆ.

ಹೌದು, ಮಾಹಿತಿ ಪ್ರಕಾರ, 6 ರಿಂದ 12 ವರ್ಷದೊಳಗಿನ ಮಕ್ಕಳ ಪ್ರವೇಶ ಶುಲ್ಕ ಮೊದಲು 10 ರೂ. ಇತ್ತು. ಈಗ ಇದು 20 ರೂ.ಗೆ ಏರಿಕೆ ಮಾಡಲಾಗಿದೆ. ಕಳೆದ ವಾರದಿಂದ ಪ್ರವೇಶ ಶುಲ್ಕ ದರವನ್ನು ತೋಟಗಾರಿಗೆ ಇಲಾಖೆ ಏರಿಕೆ ಮಾಡಿದೆ.

12 ವರ್ಷ ಮೇಲ್ಪಟ್ಟವರಿಗೆ 2020ರವರೆಗೆ 25 ರೂ. ಶುಲ್ಕ ವಿಧಿಸಲಾಗಿತ್ತು. 2021ರ ಫೆಬ್ರವರಿ ಬಳಿಕ 5 ರೂ. ಏರಿಕೆ ಮಾಡಿ 30 ರೂ. ಶುಲ್ಕವನ್ನು ನಿಗದಿ ಮಾಡಲಾಗಿತ್ತು. ಈಗ 12 ವರ್ಷ ಮೇಲ್ಪಟ್ಟವರಿಗೆ ಈ ದರವನ್ನು 50 ರೂ.ಗೆ ಏರಿಕೆ ಮಾಡಿದೆ.

You may also like

Leave a Comment