Home » Bengaluru: ವಿಮಾನ ಪ್ರಯಾಣದ ವೇಳೆ ಮಗುವಿನ ಆರೋಗ್ಯದಲ್ಲಿ ಏರುಪೇರು ; ಏಕಾಏಕಿ ನಿಂತ ಉಸಿರಾಟ ಕಂಡು ಪೋಷಕರು ಕಂಗಾಲು ! ಮುಂದಾಗಿದ್ದು ರೋಚಕ ತಿರುವು !!!

Bengaluru: ವಿಮಾನ ಪ್ರಯಾಣದ ವೇಳೆ ಮಗುವಿನ ಆರೋಗ್ಯದಲ್ಲಿ ಏರುಪೇರು ; ಏಕಾಏಕಿ ನಿಂತ ಉಸಿರಾಟ ಕಂಡು ಪೋಷಕರು ಕಂಗಾಲು ! ಮುಂದಾಗಿದ್ದು ರೋಚಕ ತಿರುವು !!!

1 comment
Bengaluru

Bengaluru: 2 ವರ್ಷದ ಮಗುವೊಂದು ಬೆಂಗಳೂರಿನಿಂದ (Bengaluru) ದೆಹಲಿಗೆ (Delhi) ಹೊರಟಿದ್ದ ವಿಸ್ತಾರ ವಿಮಾನದಲ್ಲಿ ಏಕಾಏಕಿ ಉಸಿರಾಟ ನಿಲ್ಲಿಸಿತ್ತು. ಇದರಿಂದಾಗಿ ಹೆತ್ತವರಿಗೆ ಉಸಿರೇ ನಿಂತು ಹೋದಷ್ಟು ಆತಂಕವಾಗಿತ್ತು. ಅಲ್ಲದೆ, ಪ್ರಯಾಣಿಕರೂ ಮಗುವಿನ ಸ್ಥಿತಿ ನೋಡಿ ಗಾಬರಿಗೊಂಡರು. ಆದರೆ, ಸದ್ಯ ವಿಮಾನದಲ್ಲಿದ್ದ ಐವರು ವೈದ್ಯರು ಮಗುವಿನ ಪ್ರಾಣವನ್ನು ಉಳಿಸಿದ್ದಾರೆ.

ವಿಮಾನ (flight) ಪ್ರಯಾಣದ ವೇಳೆ ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ನೋಡನೋಡುತ್ತಲೆ ಮಗು ತೀರಾ ಅನಾರೋಗ್ಯಕ್ಕೆ ಒಳಗಾಯಿತು. ಉಸಿರಾಡಲು ಕಷ್ಟ ಪಡುತ್ತಿತ್ತು. ಈ ವೇಳೆ ಇಂಡಿಯನ್ ಸೊಸೈಟಿ ಫಾರ್ ವಾಸ್ಕುಲರ್ ಅಂಡ್ ಇಂಟರ್ವೆನ್ಷನಲ್ ರೇಡಿಯಾಲಜಿ ವೈದ್ಯರ ತಂಡವು ಹಿಂದಿರುಗುತ್ತಿತ್ತು. ಆಗ ವಿಸ್ತಾರ ವಿಮಾನದಲ್ಲಿ ಮಗುವಿನ ಆರೋಗ್ಯ ಸರಿ ಇಲ್ಲದಿರುವ ವಿಚಾರ ತಿಳಿಯಿತು. ತಕ್ಷಣ ವಿಮಾನದಲ್ಲಿದ್ದ ಐವರು ವೈದ್ಯರು ಮಗುವನ್ನು ಪರೀಕ್ಷಿಸಿ, ಚಿಕಿತ್ಸೆ ನೀಡಿ ಪ್ರಾಣ ಕಾಪಾಡಿದರು.

ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ವಿಮಾನವನ್ನು ನಾಗ್ಪುರಕ್ಕೆ ತಿರುಗಿಸಲಾಯಿತು. ಅಲ್ಲಿ ಮಗುವನ್ನು ಮಕ್ಕಳ ವೈದ್ಯರಿಗೆ ಹಸ್ತಾಂತರಿಸಲಾಯಿತು. ಮಗು ಬಂದಾಗ ನಾಡಿ ಮಿಡಿತವಿರಲಿಲ್ಲ, ಕೈಕಾಲುಗಳು ಕೂಡ ತಂಪಾಗಿದ್ದವು. ಮಗು ಉಸಿರಾಡುತ್ತಿರಲಿಲ್ಲ. ಆದರೆ, 45 ನಿಮಿಷಗಳ ಬಳಿಕ ಮಗುವಿಗೆ ಉಸಿರು ಮತ್ತೆ ಬಂದಿತ್ತು.
ಒಟ್ಟಾರೆ ಮಗುವಿಗೆ ಇದು ಮರುಜನ್ಮ ಎಂದರೆ ತಪ್ಪಾಗಲಾರದು. ವೈದ್ಯರು ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿ ಮಗುವಿನ ಜೀವ ಉಳಿಸಿದರು.

ಇದನ್ನೂ ಓದಿ: Bengaluru: ಲಿವಿಂಗ್ ಟುಗೆದರ್‌ನಲ್ಲಿದ್ದ ಜೋಡಿಯ ಪ್ರೀತಿ ಕೊಲೆಯಲ್ಲಿ ಅಂತ್ಯ ; ಕುಕ್ಕರ್ ನಿಂದ ಹೊಡೆದು ಪ್ರಿಯತಮೆಯ ಕೊಂದ ಪ್ರೇಮಿ !!

You may also like

Leave a Comment