Home » Bengaluru: ಕೇಕ್ ತಿಂದು 5 ವರ್ಷದ ಮಗು ಸಾವು – ಖ್ಯಾತ ವೈದ್ಯ ಡಾ. ಅಂಜನಪ್ಪ ಹೇಳಿದ್ದೇನು?

Bengaluru: ಕೇಕ್ ತಿಂದು 5 ವರ್ಷದ ಮಗು ಸಾವು – ಖ್ಯಾತ ವೈದ್ಯ ಡಾ. ಅಂಜನಪ್ಪ ಹೇಳಿದ್ದೇನು?

0 comments

Bengaluru: ಬೆಂಗಳೂರಿನ ಕೆ ಪಿ ಅಗ್ರಹಾರದ(KP Agrahara) ಭುವನೇಶ್ವರ ನಗರದಲ್ಲಿ ಕೇಕ್ ತಿಂದು ಐದು ವರ್ಷದ ಮಗು ಸಾವನ್ನಪ್ಪಿರುವ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಖ್ಯಾತ ವೈದ್ಯ ಡಾ ಅಂಜಿನಪ್ಪ ಅವರು ಪ್ರತಿಕ್ರಿಯಿಸಿದ್ದಾರೆ.

ಕಿಮ್ಸ್ ಆಸ್ಪತ್ರೆಯ(KIMS Hospital) ನಿರ್ದೇಶಕ ಡಾಕ್ಟರ್ ಅಂಜನಪ್ಪ(Dr Anjanappa) ಅವರು ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಇದು ಫುಡ್ ಪಾಯ್ಸನ್ ಇಂದ ಆಗಿದೆ. ಆಹಾರ ಸೇವಿಸಿದ ಬಳಿಕ ಮಗು ಸಡನ್ ಆಗಿ ಮೃತಪಟ್ಟಿದೆ. ಅಲ್ಟ್ರಾ ಸೌಂಡ್ ಸ್ಕ್ಯಾನ್ಟ್ ಮಾಡಲಾಗಿದೆ. ಮಗುವಿನ ಸಾವಿನ ನಿಖರ ಕಾರಣ ವರದಿಯಲ್ಲಿ ತಿಳಿಯಬೇಕಿದೆ ಎಂದಿದ್ದಾರೆ. ಅಲ್ಲದೆ ಯಾವ ಕಾರಣ ಅಂತ ವರದಿ ನೋಡಿದ ಬಳಿಕ ಹೇಳುತ್ತೇವೆ. ಮೃತ ಮಗುವಿನ ತಂದೆ ತಾಯಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

You may also like

Leave a Comment