Bengaluru: ಲಿವಿಂಗ್ ಟುಗೆದರ್‌ನಲ್ಲಿದ್ದ (live-in relationship) ಜೋಡಿಯ ಪ್ರೀತಿ (love) ಜಗಳವಾಗಿ ಮಾರ್ಪಟ್ಟು ಕೊನೆಗೆ ಜಗಳ ಮಿತಿಮೀರಿ ಕೊಲೆಯಲ್ಲಿ ಅಂತ್ಯ ವಾಗಿರುವ ಘಟನೆ ಬೆಂಗಳೂರಿನ (Bengaluru) ಬೇಗರೂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಗಳದಿಂದ ಯುವತಿಯ ಪ್ರಾಣಪಕ್ಷಿ ಹಾರಿಹೋಗಿದೆ. ಯುವತಿಯನ್ನು ಕೊಚ್ಚಿ ನಿವಾಸಿ 24 ವರ್ಷದ ದೇವಾ ಎಂದು ಗುರುತಿಸಲಾಗಿದೆ. ಈ ಯುವತಿಯನ್ನು ಅದೇ ವಯಸ್ಸಿನ ಪ್ರಿಯತಮ ವೈಷ್ಣವ್ ಕೊಲೆ (murder) ಮಾಡಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ದೇವಾ ಮತ್ತು ವೈಷ್ಣವ್ ಇಬ್ಬರೂ ಕೇರಳ (Kerala) ಮೂಲದವರು. ವೈಷ್ಣವ್ ತಿರುವಂತನಪುರಂನಾಥ ನಿವಾಸಿ. ಇವರು ಎಂಜಿನಿಯರಿಂಗ್ ಓದಿ ಪದವಿ ಪಡೆದಿದ್ದರು. ಇಬ್ಬರಿಗೂ ಕಾಲೇಜು ಟೈಮಲ್ಲೇ ಲವ್ ಆಗಿತ್ತು. ಈ ವಿಚಾರ ಇಬ್ಬರ ಮನೆಯವರಿಗೂ ಗೊತ್ತಾಗಿ ಈ ಜೋಡಿಯ ಪ್ರೀತಿಗೆ ಒಪ್ಪಿಗೆ ಕೂಡ ನೀಡಿದ್ದರು.
ಇಬ್ಬರೂ ಓದಿನ ನಂತರ ಬೆಂಗಳೂರಿನ ಕೋರಮಂಗಲದ ಖಾಸಗಿ ಕಂಪನಿಯಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದರು. ಹಾಗೂ ಇಬ್ಬರೂ ಜೊತೆಯಲ್ಲೇ ಲಿವಿಂಗ್ ಟುಗೆದರ್ ನಲ್ಲಿದ್ದರು. ಹೀಗೇ ಜೀವನ ಸಂತೋಷದಿಂದ ಕೂಡಿರುವ ಹೊತ್ತಲ್ಲೇ ಇವರಿಬ್ಬರ ಮಧ್ಯೆ ಜಗಳ ಶುರುವಾಯಿತು. ವೈಷ್ಣವ್ ಇತ್ತೀಚೆಗೆ ದೇವಾ ಮೇಲೆ ಅನುಮಾನ ಪಡುತ್ತಿದ್ದ. ಕ್ಷಣಕ್ಕೂ ಜಗಳ ಶುರುಮಾಡುತ್ತಿದ್ದ.
ಈ ಬಾರಿಯೂ ಇವರ ಮಧ್ಯೆ ಜಗಳ ಶುರುವಾಗಿದೆ. ಆದರೆ ಉತ್ತಮ ರೀತಿಯಲ್ಲಿ ಅಂತ್ಯವಾಗಲಿಲ್ಲ. ಬದಲಾಗಿ ಕೊಲೆಯಲ್ಲಿ ಅಂತ್ಯ ಕಂಡಿದೆ. ಹೌದು, ಜಗಳ ತೀವ್ರಗೊಂಡು ಕಿಚನ್ ನಲ್ಲಿದ್ದ ಕುಕ್ಕರನ್ನು ಕೈಗೆತ್ತುಕೊಂಡಿದ್ದ ವೈಷ್ಣವ್ ದೇವಾ ತಲೆಗೆ ಬಲವಾಗಿ ಹೊಡೆದಿದ್ದಾನೆ.
ಘಟನೆ ಪರಿಣಾಮ ತೀವ್ರಗಾಯಗೊಂಡಿದ್ದ ದೇವಾ ಸಾವನ್ನಪ್ಪಿದ್ದಾಳೆ. ಎಂದು ತಿಳಿದುಬಂದಿದೆ. ಕೊಲೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಆರೋಪಿ ವೈಷ್ಣವ್ ನನ್ನ ಬಂಧಿಸಿದ್ದು, ಸದ್ಯ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: ವೇತನ ನಿಯಮಗಳಲ್ಲಿ ಅಮೋಘ ಬದಲಾವಣೆ ! ನಿಮ್ಮ ಕೈ ಸೇರಲಿದೆ ಬರುವ ತಿಂಗಳಿನಿಂದಲೇ ಹೆಚ್ಚಿನ ವೇತನ
