Home » Bengaluru : ಸಲಿಂಗ ಜೋಡಿಯಲ್ಲಿ ಒಬ್ಬಾಕೆ ಗರ್ಭಿಣಿ – ಇದು ಹೇಗೆ ಸಾಧ್ಯ?

Bengaluru : ಸಲಿಂಗ ಜೋಡಿಯಲ್ಲಿ ಒಬ್ಬಾಕೆ ಗರ್ಭಿಣಿ – ಇದು ಹೇಗೆ ಸಾಧ್ಯ?

0 comments

 

Bengaluru : ಪ್ರಕೃತಿ ನಿಯಮದ ಪ್ರಕಾರ ಗಂಡು-ಹೆಣ್ಣಿಗೆ ಅಥವಾ ಹೆಣ್ಣು- ಗಂಡಿಗೆ ಆಕರ್ಷಿತವಾಗುವುದು ಸಾಮಾನ್ಯ. ಆದರೆ ಒಮ್ಮೊಮ್ಮೆ ಪ್ರಕೃತಿ ವಿರುದ್ಧವಾಗಿಯೂ ಕೂಡ ಕೆಲವು ಘಟನೆಗಳು ನಡೆಯುವುದುಂಟು. ಇದಕ್ಕೆ ಉದಾಹರಣೆಗಳೇ ಸಲಿಂಗಿಗಳು. ಇದು ಆಶ್ಚರ್ಯದ ವಿಚಾರವೇನಲ್ಲ ಬಿಡಿ. ಆದರೆ ಅಚ್ಚರಿಯ ಸಂಗತಿ ಏನೆಂದರೆ ಬೆಂಗಳೂರಿನಲ್ಲಿ ಒಂದು ಸಲಿಂಗ ಜೋಡಿ ಇದ್ದು, ಇದರಲ್ಲಿ ಒಬ್ಬಾಕಿಯು ಗರ್ಭಿಣಿಯಾಗಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ದಿನಗಳಿಂದ ಈ ವಿಚಾರ ಸಾಕಷ್ಟು ಹಲ್ ಚಲ್ ಸೃಷ್ಟಿಸಿದೆ.

 

ಹೌದು, ಬೆಂಗಳೂರಿನ ಸಲಿಂಗ ಜೋಡಿ ಒಂದರಲ್ಲಿ ಒಬ್ಬ ಮಹಿಳೆಯು ಗರ್ಭಿಣಿಯಾಗಿದ್ದು ಹಲವು ದಿನಗಳಿಂದ ಇದು ಸುದ್ದಿಯಾಗುತ್ತಿದೆ. ಅವರ ಫೋಟೋಗಳನ್ನೂ ರಿವೀಲ್‌ ಮಾಡಲಾಗಿದೆ. ಈ ಜೋಡಿ ತಮ್ಮ ಗರ್ಭಧಾರಣೆಯ ಬಗ್ಗೆ ಸಾರ್ವಜನಿಕವಾಗಿ ವಿವರಗಳನ್ನು ಹಂಚಿಕೊಂಡಿಲ್ಲವಾದರೂ, ಇವರ ಜೋಡಿ ಹೊರಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ. ಹಾಗಿದ್ದರೆ ಇದು ಹೇಗೆ ಸಾಧ್ಯ ಎಂಬ ವಿಚಾರ ಕೂಡ ಚರ್ಚೆಯಾಗುತ್ತಿದೆ. 

 

ಇದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ ಎನ್ನುವುದೂ ಅಷ್ಟೇ ಸತ್ಯ. ಇದು ಕೃತಕ ಬುದ್ಧಿಮತ್ತೆಯಿಂದ (AI) ರೂಪುಗೊಂಡಿರುವ ಫೋಟೋ ಆಗಿರುವಲ್ಲಿಯೂ ಯಾವುದೇ ಸಂದೇಹವಿಲ್ಲ. ಒಂದು ಸುಳ್ಳು ಸುದ್ದಿಯನ್ನು ಯಾರೋ ಒಬ್ಬರು ಶೇರ್‌ ಮಾಡಿದರೆ, ಅದು ನಿಜನೋ, ಸುಳ್ಳೋ ಎಂದು ತಿಳಿಯದೇ ಶೇರ್‌ ಆಗುತ್ತಲೇ ಇರುತ್ತದೆ. ಅದರಲ್ಲಿಯೂ ಇಂಥ ಸುದ್ದಿಗಳು ಮೊದಲ ಆದ್ಯತೆ ಪಡೆಯುತ್ತವೆ. ಅದರಲ್ಲಿಯೂ ನೋಡಲು ಸುಂದರ ಯುವತಿಯರಾಗಿದ್ದರೆ ಮುಗಿದೇ ಹೋಯ್ತು. ಅದಕ್ಕಾಗಿ ಸುಳ್ಳು ಸುದ್ದಿಗಳು ಕೂಡ ಸತ್ಯದ ತಲೆಯ ಮೇಲೆ ಹೊಡೆದಂತೆ ಪ್ರಸಾರ ಆಗುತ್ತಿರುತ್ತವೆ.

 

ಹೀಗಿರಲೂಬಹುದು :

ಕೆಲವೊಮ್ಮೆ ಕೆಲವರು ದ್ವಿಲಿಂಗಿಗಳಾಗಿರುತ್ತಾರೆ. ಇದರ ಅರ್ಥ ಹೆಣ್ಣಾಗಿದ್ದರೆ, ಇನ್ನೋರ್ವ ಹೆಣ್ಣು ಮತ್ತು ಗಂಡಿನ ಮೇಲೂ ವ್ಯಾಮೋಹ ಇರುತ್ತದೆ, ಗಂಡಾಗಿದ್ದರೂ ಇದೇ ರೀತಿ ಎರಡೂ ಲಿಂಗಿಗಳ ಮೇಲೆ ಆಕರ್ಷಣೆ ಇರುತ್ತದೆ. ಅಂಥ ಸಂದರ್ಭಗಳಲ್ಲಿ ಸಲಿಂಗಿಗಳು ಒಟ್ಟಿಗೇ ಇದ್ದರೂ ಒಬ್ಬರು ಬೇರೊಬ್ಬರಿಂದ ಗರ್ಭ ಧರಿಸಿದರೆ ಅಚ್ಚರಿಯೇನಿಲ್ಲ.

You may also like