Home » Bengaluru: ಬೆಂಗಳೂರು: ಬರ್ತ್‌ಡೇ ನೆಪದಲ್ಲಿ ರೇವ್ ಪಾರ್ಟಿ : 31 ಯುವಕ-ಯುವತಿಯರ ಬಂಧನ!

Bengaluru: ಬೆಂಗಳೂರು: ಬರ್ತ್‌ಡೇ ನೆಪದಲ್ಲಿ ರೇವ್ ಪಾರ್ಟಿ : 31 ಯುವಕ-ಯುವತಿಯರ ಬಂಧನ!

0 comments

Bengaluru: ಬೆಂಗಳೂರು (Bengaluru) ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗೇಟ್ ಸಮೀಪದ ಖಾಸಗಿ ಜಮೀನಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದೇವನಹಳ್ಳಿ ಪೊಲೀಸರು ದಾಳಿ ಮಾಡಿ 31 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕನ್ನಮಂಗಲ ಗೇಟ್ ಬಳಿಯ ಫಾರ್ಮ್ ಹೌಸ್ ನಲ್ಲಿ ಪಾರ್ಟಿ ನಡೆಯುತ್ತಿರುವ ಸ್ಥಳದಲ್ಲಿ ದೇವನಹಳ್ಳಿ ಪೊಲೀಸರು ಬೆಳಗಿನ ಜಾವ 5 ಗಂಟೆಗೆ ದಾಳಿ ನಡೆಸಿದ್ದಾರೆ. ಪರಿಶೀಲನೆ ನಡೆಸಿದಾಗ ಒಬ್ಬನ ಜನ್ಮದಿನದ ಅಂಗವಾಗಿ ಪಾರ್ಟಿ ಆಯೋಜನೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ದೇವನಹಳ್ಳಿ ಎಸಿಪಿ ನವೀನ್ ನೇತೃತ್ವದ ತಂಡ ದಾಳಿ ನಡೆಸಿ, ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಯುವಕ, ಯುವತಿಯರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದೆ.

You may also like