Home » Bengaluru Stampede: RCB ವಿಜಯೋತ್ಸವ 11 ಮಂದಿ ಸಾವು: HDK ಕಳವಳ

Bengaluru Stampede: RCB ವಿಜಯೋತ್ಸವ 11 ಮಂದಿ ಸಾವು: HDK ಕಳವಳ

0 comments
H D Kumaraswamy

Bengaluru: ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿನಿಂದ ಹತ್ತಕ್ಕೂ ಹೆಚ್ಚು ಜನ ದಾರುಣವಾಗಿ ಸಾವಿಗೀಡಾಗಿದ್ದು, ನನಗೆ ತೀವ್ರ ದಿಗ್ಬ್ರಮೆ ಉಂಟು ಮಾಡಿದೆ ಎಂದು ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

ಗೆಲುವಿನ ಸಂಭ್ರಮಕ್ಕೆ ಮುನ್ನ ಮುಗ್ಧರ ಜೀವ ನಷ್ಟ ಉಂಟಾಗಿರುವುದು ನನಗೆ ಅತೀವ ದುಃಖ ತಂದಿದೆ. ಸರಿಯಾದ ಪೂರ್ವಸಿದ್ಧತೆ ಮಾಡದೆ, ಮುನ್ನೆಚ್ಚರಿಕೆ ಕ್ರಮ ವಹಿಸದೇ ಇರುವುದು ಈ ಮಹಾದುರಂತಕ್ಕೆ ನೇರ ಕಾರಣ. ದುರಂತದ ಹೊಣೆಯನ್ನು ರಾಜ್ಯ ಕಾಂಗ್ರೆಸ್‌ ಸರಕಾರವೇ ಹೊತ್ತುಕೊಳ್ಳಬೇಕು.

photo credit: Asianet Suvarna

ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸುವುದರ ಜೊತೆ ಮೃತರ ಕುಟುಂಬಗಳ ನೆರವಿಗೆ ಸರಕಾರ ಕೂಡಲೇ ಧಾವಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

You may also like