Home » Thug Life: ಭಾರೀ ವಿರೋಧದ ನಡುವೆಯೂ ಕಮಲ್ ಹಾಸನ್ ಚಿತ್ರ ಪ್ರದರ್ಶನಕ್ಕೆ ಮುಂದಾದ ಬೆಂಗಳೂರು ಥಿಯೇಟರ್ !!

Thug Life: ಭಾರೀ ವಿರೋಧದ ನಡುವೆಯೂ ಕಮಲ್ ಹಾಸನ್ ಚಿತ್ರ ಪ್ರದರ್ಶನಕ್ಕೆ ಮುಂದಾದ ಬೆಂಗಳೂರು ಥಿಯೇಟರ್ !!

0 comments

Thug Life: ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ (Thug Life) ಮುಂದಿನ ವಾರ (ಜೂನ್ 5) ರಿಲೀಸ್ ಆಗಲಿದೆ. ಆದರೆ ಕನ್ನಡದ ಬಗ್ಗೆ ಕಮಲ್ ಹಾಸನ್ ನೀಡಿದ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಥಗ್ ಲೈಫ್ಸಿನಿಮಾ ರಿಲೀಸ್ ಮಾಡಿದರೆ ಥಿಯೇಟರ್ ಸುಡುವ ಎಚ್ಚರಿಕೆಯನ್ನು ಕನ್ನಡ ಪರ ಸಂಘಟನೆಗಳು ನೀಡಿವೆ. ಆದರೂ ಕೂಡ ಇದರ ನಡುವೆಯೂ ಈ ಚಿತ್ರವನ್ನು ಪ್ರದರ್ಶನ ಮಾಡಲು ಕರ್ನಾಟಕದ ಕೆಲವು ಥಿಯೇಟರ್​ಗಳು ಮುಂದಾಗಿವೆ.

https://www.facebook.com/share/1Ytcai8XGe/

ಹೌದು, ಬೆಂಗಳೂರಿನ ಖ್ಯಾತ ಸಿಂಗಲ್​ ಸ್ಕ್ರೀನ್​ಗಳಲ್ಲಿ ಒಂದಾದ ‘ವಿಕ್ಟರಿ ಸಿನಿಮಾಸ್’ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ. ಅಲ್ಲದೆ ಶೀಘ್ರವೇ ‘ಥಗ್​ ಲೈಫ್’ ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗುವುದು ಎಂದು ಹೇಳಿದೆ. ಇದು ಕನ್ನಡಿಗರನ್ನು ಕೆರಳಿಸಿದೆ. ‘ಥಗ್ ಲೈಫ್’ ಚಿತ್ರ ತಮಿಳು, ಹಿಂದಿ, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಕನ್ನಡ ವರ್ಷನ್ ಇಲ್ಲ. ಈ ಚಿತ್ರವನ್ನು ಮಣಿರತ್ನಂ ಅವರು ನಿರ್ದೇಶನ ಮಾಡಿದ್ದಾರೆ.

You may also like