Home » Bengaluru: ಹುಡುಗರ ಡ್ರೆಸ್‌ ಧರಿಸಿ ಕಳ್ಳತನ: ಬೆಂಗಳೂರಿನಲ್ಲಿ ಇಬ್ಬರು ಹುಡುಗಿಯರು ಅರೆಸ್ಟ್‌

Bengaluru: ಹುಡುಗರ ಡ್ರೆಸ್‌ ಧರಿಸಿ ಕಳ್ಳತನ: ಬೆಂಗಳೂರಿನಲ್ಲಿ ಇಬ್ಬರು ಹುಡುಗಿಯರು ಅರೆಸ್ಟ್‌

0 comments

Bengaluru: ನಗರದಲ್ಲಿ ಹುಡುಗರ ರೀತಿ ಡ್ರೆಸ್ ಮಾಡಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಹುಡುಗಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಜ.13 ರಂದು ಸಂಪಿಗೇಹಳ್ಳಿಯ ಸಂಗಮೇಶ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದಾಗ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಹುಡುಗರು ನಡೆದುಕೊಂಡು ಹೋಗುವುದು ಪತ್ತೆಯಾಗಿತ್ತು.  

 ಸಿಸಿಟಿವಿ ಬೆನ್ನತ್ತಿ ಆರೋಪಿಗಳನ್ನು ವಶಕ್ಕೆ ಪಡೆದ ವೇಳೆ ಅದು ಹುಡುಗರಲ್ಲ, ಹುಡುಗಿಯರು ಎನ್ನುವುದು ಪತ್ತೆಯಾಗಿದೆ. ಕಳ್ಳತನ ಎಸಗಿದ ಶಾಲು ಮತ್ತು ನೀಲು ಅವರನ್ನು ಬಂಧಿಸಿದ್ದಾರೆ.

ಇಬ್ಬರು ಆರೋಪಿಗಳು ಟ್ಯಾನರಿ ರಸ್ತೆಯ‌ ನಿವಾಸಿಗಳಾಗಿದ್ದು ಹುಡುಗರ ರೀತಿ ಪ್ಯಾಂಟ್ ಶರ್ಟ್, ಟೋಪಿ ಹಾಕಿಕೊಂಡು ಬೈಕಿನಲ್ಲಿ ಓಡಾಡುತ್ತಿದ್ದರು. ನಿರ್ಜನ ಪ್ರದೇಶದ ಮನೆಗಳಲ್ಲಿ ಹಾಡುಹಗಲೇ ಕಳ್ಳತನ ಮಾಡುತ್ತಿದ್ದರು. ಸದ್ಯ ಇಬ್ಬರನ್ನು ಬಂಧಿಸಿ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ‌.

You may also like