Bangalore: ಬೆಂಗಳೂರು (Bangalore) ಜನರು ಇನ್ಮುಂದೆ ಕಸ ಎಸೆಯುವಾಗ ಸ್ವಲ್ಪ ಹುಷಾರಾಗಿರಿ. ಹೌದು. ಇದುವರೆಗೆ, ಕಸ ಎಸೆದು ಮೊದಲ ಬಾರಿ ಸಿಕ್ಕಿಬಿದ್ದರೆ 500, 1000 ರೂ ದಂಡ ವಿಧಿಸಲಾಗುತ್ತಿತ್ತು. ಇನ್ಮುಂದೆ 2000 ರೂ ದಂಡ ವಿಧಿಸಲಾಗುತ್ತದೆ.
ಇದುವರೆಗೆ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಮೊದಲ ಬಾರಿಗೆ 500 ರೂ. ದಂಡ ವಿಧಿಸಲಾಗುವುದು ಮತ್ತೆ ಅವರು ಇಂತಹದ್ದೇ ತಪ್ಪು ಮಾಡಿದಲ್ಲಿ 2000 ರೂ.ಗಳ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಮುಖ್ಯ ಕಾರ್ಯನಿರ್ವಾಹಕ ಕರೀಗೌಡ ಎಚ್ಚರಿಸಿದ್ದಾರೆ.
ಮನೆ ಮುಂದೆ ಕಸದ ವಾಹನ ಬಂದರೂ ಕಸ ಹಾಕದೆ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಬಿಸಿ ಮುಟ್ಟಿಸಬೇಕು ಎಂಬ ಉದ್ದೇಶದಿಂದ ಇಂತಹ ಕಠಿಣ ತೀರ್ಮಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಅದಲ್ಲದೆ ಪ್ಲಾಸ್ಟಿಕ್ ಬಳಕೆ ತಡೆಗೆ 27 ತಂಡಗಳ ರಚನೆ ಮಾಡಲಾಗುವುದು ಈ ತಂಡಗಳು ವಾರಕ್ಕೆ ಐದು ವಾರ್ಡ್ ಗಳಲ್ಲಿ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
