Benglore: ರಾಜ್ಯದಲ್ಲಿ ಜಾರಿಯಾಗಿರೋ ಶಕ್ತಿ ಯೋಜನೆಗೆ (ಮಹಿಳೆಯರ ಉಚಿತ ಬಸ್ ಪ್ರಯಾಣ) ಭರ್ಜರಿಯಾದ ರೆಸ್ಪಾನ್ಸ್ ಸಿಗುತ್ತಿದೆ. ರಾಜ್ಯಾದ್ಯಂತ ಮಹಿಳೆಯರು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಬೆನ್ನಲ್ಲೇ ಇಲ್ಲೊಬ್ಬ ಅಜ್ಜಿ (Old Woman) ಒಂದು ಇಡೀ ಕೆಎಸ್‌ಆರ್‌ಟಿಸಿ ಬಸ್ (KSRTC Bus) ಅನ್ನೇ ಬುಕ್ ಮಾಡಲು ಬಂದಿದ್ದಾರೆ.
ಹೌದು, KSRTC ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ನಂತರ ನಾನಾ ರೀತಿಯ ಸುದ್ದಿಗಳು ಕೇಳಿಬರುತ್ತಿವೆ. ಕೆಲವು ಕಡೆ ನಿರ್ವಾಹಕರಿಗೂ ಪ್ರಯಾಣಿಕರಿಗೂ ಜಗಳವಾದಲ್ಲಿ ಇನ್ನೂ ಕೆಲವು ಕಡೆ ನೂಕು ನುಗ್ಗಲು ಉಂಟಾಗುತ್ತಿದೆ. ಇಲ್ಲೊಬ್ಬರು ಅಜ್ಜಿ, ಹೇಗಿದ್ದರೂ ಉಚಿತ ಪ್ರಯಾಣ ಇದೆ ಎಂದು ಒಂದು ಬಸ್ಸನ್ನೇ ಬುಕ್(Bus book) ಮಾಡಲು ಮಾಹಿತಿ ಕೇಂದ್ರಕ್ಕೆ ಬಂದಿದ್ದಾರೆ.
ಅಂದಹಾಗೆ ಬೆಂಗಳೂರಿನ (Benglore) ಬ್ಯಾಡರಹಳ್ಳಿಯ(byadarahalli) ನಿವಾಸಿ ಸುನಂದಾ ಮೆಜೆಸ್ಟಿಕ್‌ನ KSRTC ವಿಚಾರಣಾ ಕೌಂಟರ್‌ಗೆ ಬಂದು ಇಡೀ ಬಸ್‌ನ 48 ಸೀಟುಗಳನ್ನು ರಿಸರ್ವ್ ಮಾಡುವ ಬಗ್ಗೆ ವಿಚಾರಿಸಿದ್ದಾರೆ. ಯಾವ್ಯಾವ ಮಾರ್ಗಗಳಿಗೆ ಎಷ್ಟು ಗಂಟೆಗೆ ಬಸ್‌ಗಳ ವ್ಯವಸ್ಥೆಯಿದೆ ಎಂದು ಅಜ್ಜಿ ಪೇಪರ್‌ನಲ್ಲಿ ಬರೆದುಕೊಂಡು ಹೋಗಿದ್ದಾರೆ.
ಸುನಂದಾ ತಮ್ಮ ಇಡೀ ತಂಡದೊಂದಿಗೆ 4-5 ದಿನಗಳ ಕಾಲ ಧಾರ್ಮಿಕ ಕ್ಷೇತ್ರಗಳ ವಿಸಿಟ್ಗೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇವರು ಸದ್ಯ 20 ಜನರ ತಂಡ ಮಾಡಿಕೊಂಡಿದ್ದು, ಇನ್ನೂ 20 ಜನರನ್ನು ಸೇರಿಸಿಕೊಳ್ಳುವ ಪ್ಲ್ಯಾನ್(Plan) ಇದೆಯಂತೆ!! ಅಜ್ಜಿಯ ಹಂಚಿಕೆ ಪ್ರಕಾರ ಮನೆಯ ಮಹಿಳಾ ಕುಟುಂಬಸ್ಥರು ಹಾಗೂ ಮಹಿಳಾ ಸಂಘ ಸಂಸ್ಥೆಯವರು ಸೇರಿ ಒಟ್ಟು 48 ಜನ್ರ ಸೀಟ್ ರಿಸರ್ವ್ ಮಾಡಿಕೊಳ್ಳಲಾಗುತ್ತದೆ.
ಇನ್ನು ಗಮ್ಮತ್ತಿನ ವಿಚಾರ ಅಂದ್ರೆ ಉಚಿತ ಬಸ್‌ಗಳಲ್ಲಿ 20 ರೂ. ನೀಡಿ ಮುಂಗಡವಾಗಿ ಸೀಟ್‌ಗಳನ್ನು ರಿಸರ್ವ್ ಮಾಡಬಹುದು. ಹೀಗಾಗಿ ಅಜ್ಜಿ ಬಸ್ ನಿಲ್ದಾಣಕ್ಕೆ ಬಂದು ವಿಚಾರಿಸಿದ್ದಾರೆ. ಆದರೆ ಒಂದು ಬಸ್‌ನಲ್ಲಿ ಮಹಿಳೆಯರಿಗೆ 50% ಮಾತ್ರವೇ ಉಚಿತ ಪ್ರಯಾಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ವಿಚಾರವನ್ನು ಕೂಡ ಸರ್ಕಾರ ಈ ಮೊದಲೇ ತಿಳಿಸಿತ್ತು.
ಇದನ್ನು ಓದಿ: Hindu Muslim: ಹಿಂದೂ ಹುಡುಗಿಯನ್ನು ಮದುವೆಯಾಗಲು ಮುಸ್ಲಿಂ ಯುವಕ ಮತಾಂತರ!
