Home » ಚಿನ್ನಸ್ವಾಮಿ ಸ್ಟೇಡಿಯಂ ಪವರ್ ಕಟ್ ಮಾಡಿ ಬಿಟ್ಟ ಬೆಸ್ಕಾಂ

ಚಿನ್ನಸ್ವಾಮಿ ಸ್ಟೇಡಿಯಂ ಪವರ್ ಕಟ್ ಮಾಡಿ ಬಿಟ್ಟ ಬೆಸ್ಕಾಂ

0 comments

ಬೆಂಗಳೂರು: ರಾಯಲ್ ಚಾಲೆoಜರ್ಸ್ ಬೆಂಗಳೂರು (ಆರ್ ಸಿಬಿ) ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಕಾಲ್ತುಳಿತ ಸಂಭವಿಸಿ 11 ಸಾವನ್ನಪ್ಪಿದ ನಂತರ ಈಗ ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಈಗ ಚಿನ್ನಸ್ವಾಮಿ ಕ್ರೀಡಾಂಗಣದ ವಿದ್ಯುತ್‌ (Electricity) ಕಟ್ ಮಾಡಲಾಗಿದೆ.

ರಾಜ್ಯ ಅಗ್ನಿಶಾಮಕದಳದ ಪೋಲಿಸ್ ಮಹಾ ನಿರ್ದೇಶಕರಿಂದ ಕೆಎಸ್‌ಸಿಎದ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಬೆಸ್ಕಾಂ ಎಂಡಿಗೆ ಪತ್ರ ಬರೆಯಲಾಗಿದೆ. ಅಗತ್ಯ ಅಗ್ನಿಸುರಕ್ಷತಾ ಮುನ್ನೆಚ್ಚರಿಕೆ ‌ಕ್ರಮಗಳನ್ನು ಸಂಪೂರ್ಣವಾಗಿ ಅನುಷ್ಟಾನಗೊಳಿಸದ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ.

ಈ ಹೀಗಾಗಿ ಬೆಸ್ಕಾಂನಿಂದ ಚಿನ್ನಸ್ವಾಮಿ ‌ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಬೆಸ್ಕಾಂನ ಏಕ್ಸ್ ಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾಗಿ ಪಬ್ಲಿಕ್ ಟಿವಿ ವರದಿ ಮಾಡಿದೆ. ಸದ್ಯ ಜನರೇಟರ್‌ನ್ನು ಬಳಸಿ ಚಿನ್ನಸ್ವಾಮಿ ಕ್ರೀಡಾಂಗಣ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ಮಾಹಿತಿಯಿದೆ.

You may also like