Home » High Court : ಭಗವದ್ಗೀತೆ ಧಾರ್ಮಿಕ ಗ್ರಂಥವಲ್ಲ – ಹೈ ಕೋರ್ಟ್ ತೀರ್ಪು, ಹಾಗಿದ್ರೆ ಮತ್ತೇನು?

High Court : ಭಗವದ್ಗೀತೆ ಧಾರ್ಮಿಕ ಗ್ರಂಥವಲ್ಲ – ಹೈ ಕೋರ್ಟ್ ತೀರ್ಪು, ಹಾಗಿದ್ರೆ ಮತ್ತೇನು?

0 comments

High Court : ಭಗವದ್ಗೀತೆಯು ಧಾರ್ಮಿಕ ಗ್ರಂಥವಲ್ಲ ಎಂದು ಮದ್ರಾಸ್ ಹೈಕೋರ್ಟು ತೀರ್ಪನ್ನು ನೀಡಿದೆ. ಅಂದ್ರೆ ಕೋರ್ಟ್ ಪ್ರಕಾರ ಭಗವದ್ಗೀತೆಯು ಕೇವಲ ಧಾರ್ಮಿಕ ಗ್ರಂಥವಲ್ಲ. ಅದು ಧರ್ಮಗಳನ್ನು ಮೀರಿದ್ದು, ಭಾರತೀಯ ಸಂಸ್ಕೃತಿಯ ಪ್ರತೀಕ ಎಂಬುದಾಗಿ ಕೋರ್ಟ್ ಅಭಿಪ್ರಾಯ ಪಟ್ಟಿದೆ.

ಹೌದು, ಪ್ರಕರಣವೊಂದರಲ್ಲಿನ ತೀರ್ಪು ಭಗವದ್ಗೀತೆಯನ್ನು ಕೇವಲ ಪುಸ್ತಕವಾಗಿ ನೋಡಲಾಗುವುದಿಲ್ಲ. ಭಗವದ್ಗೀತೆ, ವೇದಾಂತ ಮತ್ತು ಯೋಗದಂತಹ ವಿಷಯಗಳನ್ನು ಕಲಿಸುತ್ತದೆ ಎಂಬ ಕಾರಣಕ್ಕಾಗಿ ಒಂದು ಸಂಸ್ಥೆಯನ್ನ ಧಾರ್ಮಿಕ ಸಂಸ್ಥೆ ಎಂದು ಬ್ರಾಂಡ್ ಮಾಡಲು ಸಾಧ್ಯವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಕೊಯಮತ್ತೂರು ಮೂಲದ ಆರ್ಷ ವಿದ್ಯಾ ಪರಂಪರೆ ಟ್ರಸ್ಟ್ ವೇದಾಂತ, ಸಂಸ್ಕೃತ ಮತ್ತು ಹಠ ಯೋಗದಂತಹ ವಿಷಯಗಳನ್ನ ಕಲಿಸುತ್ತದೆ ಮತ್ತು ಪ್ರಾಚೀನ ಗ್ರಂಥಗಳ ಡಿಜಿಟಲೀಕರಣ ಕಾರ್ಯವನ್ನ ನಡೆಸುತ್ತಿದೆ. ವಿದೇಶಿ ನಿಧಿಯನ್ನ ಸ್ವೀಕರಿಸಲು ಈ ಟ್ರಸ್ಟ್ 2021ರಲ್ಲಿ ಎಫ್‌ಸಿಆರ್‌ಎ ನೋಂದಣಿಗೆ ಅರ್ಜಿ ಸಲ್ಲಿಸಿತ್ತು. ಆದಾಗ್ಯೂ, ಕೇಂದ್ರ ಗೃಹ ಸಚಿವಾಲಯವು ಎರಡು ಪ್ರಮುಖ ಕಾರಣಗಳನ್ನ ಉಲ್ಲೇಖಿಸಿ ಈ ಅರ್ಜಿಯನ್ನ ತಿರಸ್ಕರಿಸಿದೆ. 

ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಅಡಿಯಲ್ಲಿ ಟ್ರಸ್ಟ್‌ನ ಅರ್ಜಿಯನ್ನ ಕೇಂದ್ರ ಸರ್ಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಈ ಪ್ರಮುಖ ತೀರ್ಪು ನೀಡಿದ್ದಾರೆ. ಭಗವದ್ಗೀತೆ ಧರ್ಮಗಳನ್ನ ಮೀರಿದ್ದು ಮತ್ತು ಭಾರತೀಯ ಸಂಸ್ಕೃತಿಯ ಸಂಕೇತವಾಗಿದೆ ಎಂದು ಹೈಕೋರ್ಟ್ ಹೇಳಿದೆ.

You may also like