Home » Puttur: ‘ನಮ್ಮ ಕಂಬಳʼ ದ ಸದಸ್ಯ ಪುತ್ತೂರಿನ ಭರತ್‌ ಮತಾವು ಹೃದಯಾಘಾತದಿಂದ ಸಾವು!

Puttur: ‘ನಮ್ಮ ಕಂಬಳʼ ದ ಸದಸ್ಯ ಪುತ್ತೂರಿನ ಭರತ್‌ ಮತಾವು ಹೃದಯಾಘಾತದಿಂದ ಸಾವು!

0 comments

Puttur: ಬೆಂಗಳೂರಿನಲ್ಲಿ ನಡೆದ ʼ ನಮ್ಮ ಕಂಬಳʼ ದ ಸದಸ್ಯ ಭರತ್‌ ಮತಾವು (43) ಮೇ1 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಭರತ್‌ ಬೆಂಗಳೂರಿನಲ್ಲಿ ಸಿವಿಲ್‌ ಇಂಜಿನಿಯರ್‌ ಆಗಿದ್ದು, ಸ್ವಯಂ ಉದ್ಯೋಗ ಮಾಡುತ್ತಿದ್ದು, ಅವರು ಅಲ್ಲಿ ಹೃದಯಾಘಾತಕ್ಕೆ ಒಳಗಾಗಿ ನಿಧನ ಹೊಂದಿದ್ದಾರೆ.

ಪಡ್ನೂರು ಗ್ರಾಮದ ಮತಾವು ದಿ.ಹರೀಶ ಗೌಡ ಮತ್ತು ಜಯಂತಿ ದಂಪತಿಯ ಹಿರಿಯ ಪುತ್ರ ಭರತ್.‌

ಮೇಲೊಬ್ಬ ಮಾಯಾವಿ ಎಂಬ ಸಿನಿಮಾ ನಿರ್ಮಾಣ ಮಾಡಿದ್ದರು. ಪುತ್ತೂರು ಭರತ್‌ ಎಂದೇ ಇವರು ಜನಪ್ರಿಯ. ಮೃತ ಭರತ್‌ ತಾಯಿ ಜಯಂತಿ, ಪತ್ನಿ ರವಿಕಲಾ, ಪುತ್ರ ನಿಹಾರ್‌, ಪುತ್ರಿ ಹಂಸಿಕಾ, ತಮ್ಮ ಆದರ್ಶ, ತಂಗಿ ಸೌಮ್ಯ ಮತ್ತು ಬಂಧುಬಳಗವನ್ನು ಅಗಲಿದ್ದಾರೆ.

You may also like