Home » Tragedy: ಒಂದುವರೆ ವರ್ಷದ ಹಸುಳೆ ಮೇಲೆ ಕಾರು ಹರಿದು ಮಗು ಮೃತ್ಯು: ಭಯಾನಕ ವೀಡಿಯೋ ವೈರಲ್!

Tragedy: ಒಂದುವರೆ ವರ್ಷದ ಹಸುಳೆ ಮೇಲೆ ಕಾರು ಹರಿದು ಮಗು ಮೃತ್ಯು: ಭಯಾನಕ ವೀಡಿಯೋ ವೈರಲ್!

0 comments
Tragedy

Tragedy: ಬೀದರ್ ನಗರದ ಹಾರೂರಗೇರಿಯ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆಯ ಎದುರು ಬದಿಯಲ್ಲಿ ಒಂದೂವರೆ ವರ್ಷದ ಮಗು ಆಟವಾಡುತಿದ್ದ ಸಂದರ್ಭ ಇನ್ನೋವಾ ಕಾರೊಂದು ಹರಿದು, ಒಂದೂವರೆ ವರ್ಷದ ಮಗು ಮೃತಪಟ್ಟ(Death)ಹೃದಯವಿದ್ರಾವಕ ಘಟನೆ ವರದಿಯಾಗಿದೆ.

ಮೃತಪಟ್ಟ ಒಂದೂವರೆ ವರ್ಷದ ಮಗುವನ್ನು ಹಾರೂರಗೇರಿ ನಿವಾಸಿಗಳಾದ ಸಂಗೀತಾ ಸತೀಷ ಪಾಟೀಲ ದಂಪತಿಗಳ ಪುತ್ರ ಎಂದು ಗುರುತಿಸಲಾಗಿದೆ. ಕೆಲ ತಿಂಗಳುಗಳ ಹಿಂದೆ ಮಗುವಿನ ಮೊದಲನೇ ವರ್ಷದ ಹುಟ್ಟುಹಬ್ಬವನ್ನು(Birthday)ಅದ್ಧೂರಿಯಾಗಿ ಆಚರಣೆ ಮಾಡಲಾಗಿತ್ತು ಎನ್ನಲಾಗಿದೆ. ಆದರೆ, ಕಾರು ಚಾಲಕನ ಅಜಾಗರೂಕತೆಯಿಂದ ಪುಟ್ಟ ಕಂದಮ್ಮನ ಜೀವ ಹಾರಿ ಹೋಗಿದೆ.

ಚಾಲಕ ಮೊಬೈಲ್ ನಲ್ಲಿ ಮಾತನಾಡುತ್ತ ಕಾರು ಓಡಿಸಿಕೊಂಡು ಬಂದ ಹಿನ್ನೆಲೆ ಒಂದುವರೆ ವರ್ಷದ ಮಗುವಿನ ಮೇಲೆ ಕಾರು ಹರಿಸಿದ್ದಾನೆ. ಆದರೆ, ಈ ವಿಚಾರ ಆತನ ಅರಿವಿಗೆ ಬಂದಿಲ್ಲ ಎನ್ನಲಾಗಿದೆ. ಈ ಸಂದರ್ಭ ಪಕ್ಕದಲ್ಲೇ ಇದ್ದ ಇನ್ನೊಂದು ಕಾರಿನ ಚಾಲಕ ಈ ಘಟನೆ ಕಂಡು ತಕ್ಷಣವೇ ಮಗುವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರೂ ಕೂಡ ಮಗುವಿನ ಪ್ರಾಣ ಪಕ್ಷಿ ಅಷ್ಟರಲ್ಲಿ ಹಾರಿ ಹೋಗಿತ್ತು. ಈ ಕುರಿತು ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರನ್ನು ದಸ್ತಗಿರಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment