Monalisa: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಆಗಮಿಸಿರುವ ಕೋಟ್ಯಂತರ ಮಂದಿಯ ನಡುವೆ, ರುದ್ರಾಕ್ಷಿ ಸರ ಮಾರಾಟ ಮಾಡುತ್ತಿದ್ದ 16 ವರ್ಷದ ಹುಡುಗಿ ಮೊನಾಲಿಸಾ ಎಲ್ಲರನ್ನು ತನ್ನತ್ತ ಸೆಳೆಯುವ ಮೂಲಕ ರಾತ್ರೋ ರಾತ್ರಿ ಇಡೀ ದೇಶದ ಗಮನ ಸೆಳೆದಿದ್ದಳು. ಸೋಷಿಯಲ್ ಮೀಡಿಯಾಗಳಲ್ಲಿ ಈಕೆಯದ್ದೇ ಕಾರುಬಾರು. ಕುಂಭಮೇಳ ಎಂದರೆ ಮೊನಾಲಿಸಾ ಎನ್ನುವಷ್ಟರ ಮಟ್ಟಿಗೆ ಈಕೆ ಸದ್ದು ಮಾಡುತ್ತಿದ್ದಾಳೆ. ಮೊನಾಲಿಸಾಳಿಗೆ ಸಿನಿಮಾಗಳ ಆಫರ್ ಕೂಡ ಬಂದಿದ್ದು ಈಗಾಗಲೇ ಅವಳಿಗೆ ಆಕ್ಟಿಂಗ್ ತರಬೇತಿಯನ್ನು ನೀಡಲಾಗುತ್ತಿದೆ. ಇದರ ಮಧ್ಯೆ ನಿರ್ಮಾಪಕ ಜಿತೇಂದ್ರ ನಾರಾಯಣ್ ಅವರು ಸನೋಜ್ ಅವರು ಮೊನಾಲಿಸಾ ಅವರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹೌದು, ಸನೋಜ್ ಮೇಲೆ ಮೊನಾಲಿಸಾಗೆ ಮೋಸ ಮಾಡಿದ ಆರೋಪವಿದೆ. ನಿರ್ಮಾಪಕ ಜಿತೇಂದ್ರ ನಾರಾಯಣ್ ಅವರು ಸನೋಜ್ ವಿರುದ್ಧ ಈ ಆರೋಪಗಳನ್ನು ಮಾಡಿದ್ದಾರೆ. ಜಿತೇಂದ್ರ ನಾರಾಯಣ್ ಸಿಂಗ್ ಅಲಿಯಾಸ್ ವಾಸಿಮ್ ರಿಜ್ವಿ ಇತ್ತೀಚೆಗೆ ಟಾಪ್ ಸೀಕ್ರೆಟ್‌ಗೆ ಸಂದರ್ಶನ ನೀಡಿದರು. ಈ ಸಂದರ್ಶನದಲ್ಲಿ, ಸನೋಜ್ ಬಡ ಕುಟುಂಬದ ಹುಡುಗಿಯೊಬ್ಬಳನ್ನು ಬಳಸಿಕೊಳ್ಳುತ್ತಿದ್ದಾರೆ.. ಆತ ಆ ಮುಗ್ಧ ಹುಡುಗಿಯರನ್ನು ಸಿನಿಮಾಗಳಲ್ಲಿ ಕೆಲಸ ಮಾಡುವಂತೆ ಆಮಿಷ ಒಡ್ಡಿ ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಾನೆ ಎಂದು ಜಿತೇಂದ್ರ ಹೇಳಿದ್ದಾರೆ.. ನನಗೆ ಸನೋಜ್ ಜೊತೆ ಕೆಲಸ ಮಾಡುವಾಗ ತುಂಬಾ ಕೆಟ್ಟ ಅನುಭವ ಆಗಿತ್ತು.. ಸನೋಜ್ ನಾನು ಮೂರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ.. ಎಂದು ಹೇಳಿಕೊಂಡಿದ್ದಾರೆ..
ಅಲ್ಲದೆ “ಮೊನಾಲಿಸಾ ಮತ್ತು ಅವರ ಕುಟುಂಬದ ಬಗ್ಗೆ ನನಗೆ ತುಂಬಾ ವಿಷಾದವಿದೆ.” ಅವರು ತುಂಬಾ ಸರಳ ಮತ್ತು ನೇರ ಜನರು. ಆದರೆ ಸನೋಜ್ ಮಿಶ್ರಾ ಅವರಂತಹ ಜನರು ನಿಮ್ಮ ಬಾಗಿಲಲ್ಲಿ ನಿಂತು ಕರೆದರೇ ಯಾವುದೇ ಪ್ರಶ್ನೆ ಮಾಡದೆ, ಅವರು ತಮ್ಮ ಮಗಳನ್ನು ಸನೋಜ್‌ಗೆ ಒಪ್ಪಿಸಿದ್ದಾರೆ.. ಇದೇ ವಿಚಿತ್ರ ಎಂದು ಜಿತೇಂದ್ರ ಹೇಳಿದ್ದಾರೆ.. ಈ ಸಂದರ್ಶನದಲ್ಲಿ, ಜಿತೇಂದ್ರ ಅವರು ಪ್ರಸ್ತುತ ಯಾರೂ ಸನೋಜ್ ಅವರೊಂದಿಗೆ ಕೆಲಸ ಮಾಡಲು ಸಿದ್ಧರಿಲ್ಲ ಎಂದು ಹೇಳಿಕೊಂಡಿದ್ದಾರೆ..
