Home » Big News : ಬಂಡೆಮಠ ಸ್ವಾಮೀಜಿ ಆತ್ಮಹತ್ಯೆ ಕೇಸ್ ; ಯುವತಿಯ ಜಾಲದಲ್ಲಿ ಅನೇಕ ಮಂದಿ| ಯಾರೆಲ್ಲ ಗೊತ್ತೇ?

Big News : ಬಂಡೆಮಠ ಸ್ವಾಮೀಜಿ ಆತ್ಮಹತ್ಯೆ ಕೇಸ್ ; ಯುವತಿಯ ಜಾಲದಲ್ಲಿ ಅನೇಕ ಮಂದಿ| ಯಾರೆಲ್ಲ ಗೊತ್ತೇ?

0 comments

ಬಂಡೆಮಠದ ಬಸವಲಿಂಗಶ್ರೀ ಸ್ವಾಮೀಜಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಯುವತಿ ನೀಲಾಂಬಿಕೆ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಂತಹ ಮೊಬೈಲ್ ಈಗ ಪೊಲೀಸರ ಕೈ ಸೇರಿದೆ. ಇದೀಗ ಮೊಬೈಲ್ ನೀಲಾಂಬಿಕೆಯ ಲೀಲೆಗಳನ್ನು ಬಿಚ್ಚಿಟ್ಟಿದೆ. ಬಂಡೆಮಠದ ಸ್ವಾಮೀಜಿ ಮಾತ್ರವಲ್ಲದೆ ಇನ್ನಷ್ಟು ಸ್ವಾಮೀಜಿಗಳು ನೀಲಾಂಬಿಕೆಯ ಖೆಡ್ಡಾಗೆ ಬಿದ್ದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇನ್ನೂ, ಈ ಪೋನನ್ನು ಹಲವು ಬಾರಿ ನೀಲಾಂಬಿಕೆ ಫ್ಲ್ಯಾಶ್ ಮಾಡಿದ್ದರಿಂದ ಅದರಲ್ಲಿದ್ದ ಹಲವಾರು ಮಾಹಿತಿಗಳು ಡಿಲಿಟ್ ಆಗಿದೆ. ಆಕೆ ಪೊಲೀಸರ ಕೈಗೆ ಸಿಕ್ಕಿ ಬೀಳಬಾರದು ಎಂಬ ಕಾರಣಕ್ಕೆ ಮೊಬೈಲ್ ನ್ನು ಫ್ಲ್ಯಾಶ್ ಮಾಡಿದ್ದಳು. ಆದರೆ ವಿಚಾರಣೆ ವೇಳೆ ಎಲ್ಲಾ ಸತ್ಯಗಳನ್ನು ನೀಲಾಂಬಿಕೆ ಹೊರಹಾಕಿದ್ದಾಳೆ. ಅಷ್ಟಲ್ಲದೆ ಬಸವಲಿಂಗ ಶ್ರೀಯವರ ಮೂರು ವಿಡಿಯೋಗಳನ್ನು ರೆಕಾರ್ಡ್ ಮಾಡಿ ಕಣ್ಣೂರು ಶ್ರೀಗಳಿಗೆ ತೋರಿಸಿ ಮಹದೇವಯ್ಯನಿಗೆ ಕಳುಹಿಸಿದ್ದಾಗಿ ಹೇಳಿದ್ದಾಳೆ. ನಂತರ ಆಕೆ ಸಿಕ್ಕಿ ಬೀಳಬಾರದೆಂಬ ಕಾರಣಕ್ಕೆ ಮೊಬೈಲ್ ಫ್ಲ್ಯಾಶ್ ಮಾಡಿ ಹೊಸ ಮೊಬೈಲ್ ಖರೀದಿಸಿದ್ದಳು.

ಅಲ್ಲದೆ, ಆಕೆ ಬಂಡೆಮಠದ ಬಸವಲಿಂಗಶ್ರೀಗಳ ಜೊತೆ ಸುಮಾರು ಎರಡು ವರ್ಷಗಳಿಂದ ಸಂಪರ್ಕದಲ್ಲಿದ್ದಳಂತೆ. ಇದಿಷ್ಟೇ ಅಲ್ಲದೆ, ನೀಲಾಂಬಿಕೆ ಹಾಕಿದ್ದ ಬಲೆಗೆ ಬೇರೆ ಸ್ವಾಮೀಜಿಗಳು ಬಿದ್ದಿರುವ ಸಂಗತಿ ತಿಳಿದು ಬಂದಿದೆ. ಹಲವಾರು ಸ್ವಾಮೀಜಿಗಳ ಜೊತೆಗೆ ನೀಲಾಂಬಿಕೆ ನಿರಂತರವಾಗಿ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದಳು. ಹೀಗೆ ಮಾತನಾಡಬೇಕಾದರೆ ಆಕೆಯ ಮುಖ ಕಾಣದಂತೆ ಕವರ್ ಮಾಡುತ್ತಿದ್ದಳು ಎಂಬ ಮಾಹಿತಿ ಬಯಲಾಗಿದೆ.

You may also like

Leave a Comment