Home » Cubbon Park : ಪ್ರೇಮಿಗಳಿಗೆ ಬಿಗ್‌ ಶಾಕ್‌..! ಬೆಂಗಳೂರು ‘ಕಬ್ಬನ್‌ ಪಾರ್ಕ್‌ನಲ್ಲಿ ಅಸಭ್ಯವಾಗಿ ವರ್ತಿಸಿದ್ರೆʼ ಲಾಠಿ ಬಿಸಿ ತಟ್ಟೋದು ಗ್ಯಾರಂಟಿ.!

Cubbon Park : ಪ್ರೇಮಿಗಳಿಗೆ ಬಿಗ್‌ ಶಾಕ್‌..! ಬೆಂಗಳೂರು ‘ಕಬ್ಬನ್‌ ಪಾರ್ಕ್‌ನಲ್ಲಿ ಅಸಭ್ಯವಾಗಿ ವರ್ತಿಸಿದ್ರೆʼ ಲಾಠಿ ಬಿಸಿ ತಟ್ಟೋದು ಗ್ಯಾರಂಟಿ.!

1 comment
Big shock for lovers

Big shock for lovers : ಕಬ್ಬನ್‌ ಪಾರ್ಕ್‌ ಸಿಲಿಕಾನ್‌ ಸಿಟಿ ಹಲವು ಉದ್ಯಾನವನಗಳಲ್ಲಿ ಒಂದಾದ ಉದ್ಯಾನವಾಗಿದೆ. ಇಲ್ಲಿ ಲಕ್ಷಾಂತರ ಜನರು ಬಂದು ಹಚ್ಚ ಹಸಿರಿನ ಸೌಂದರ್ಯವನ್ನು ಅಸ್ವಾಧಿಸುತ್ತಾರೆ. ಅದರಲ್ಲೂ ವೀಕೆಂಡ್‌ ಬಂತಂದ್ರೆ ಸಾಕು ಹೆಚ್ಚಿನ ಯುವಕ ಯುವತಿಯರೇ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಪ್ರೇಮಿಗಳ (Big shock for lovers) ಓಡಾವೂ ಕಮ್ಮಿಯೇನಿಲ್ಲ. ಮರದ ಅಡ್ಡಗಳಲ್ಲಿ ಕುಳಿತುಕೊಂಡು, ಮೈಗೆ ಮೈ ಸವರಿಕೊಂಡು ತಮ್ಮ ಪ್ರೇಮ ನಿವೇಧನೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದರಿಂದ ಒಂದಷ್ಟು ಕುಟುಂಬಗಳಿಗೆ ಮುಜುಗರಕ್ಕೆ ಒಳಗಾಗುವುದು ತಿಳಿದಿರಬಹುದು.

ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕಬ್ಬನ್‌ ಪಾರ್ಕ್‌ಗೆ ಹೊಸ ರೂಲ್ಸ್‌ ಬಿಸಿ ತಟ್ಟಿದ್ದು, ಸದಾ ಪ್ರೇಮಿಗಳ ಅಸಭ್ಯ ವರ್ತನೆಗೆ ಬ್ರೇಕ್‌ ಹಾಕೋದಕ್ಕಾಗಿ ಕಠಿಣ ಕ್ರಮಗಳನ್ನು ಜಾರಿಗೆ ಮಾಡಲಾಗಿದೆ. ಇನ್ಮುಂದೆ ಅಸಭ್ಯ ವರ್ತನೆ ಕೃತ್ಯ ಎಸಗುವವರು ಕಂಡು ಬಂದರೆ ಸೆಕ್ಯೂರಿ ಮೈಕ್ನಲ್ಲಿ ಕರೆಯುವ ಮೂಲಕ ಹೊರಗಡೆ ಕಳುಹಿಸುತ್ತಾರೆ.
ಅಷ್ಟೇ ಅಲ್ಲದೇ ಇತ್ತೀಚಿನ ದಿನಗಳಲ್ಲಿ ಪ್ರೇಮಿಗಳ ಪಾರ್ಕನಂತೆ ಭಾಸವಾಗುತ್ತಿತ್ತು .ಹೀಗಾಗಿ ಕಬ್ಬನ್ ಪಾರ್ಕ್‌ಗೆ ಬರುವ ಕುಟುಂಬಗಳು ದೂರು ನೀಡಿರುವ ಹಿನ್ನೆಲೆಯಲ್ಲಿ ಹೊಸ ರೂಲ್ಸ್‌ ಜಾರಿಗೆ ತರಲಾಗಿದೆ ಅಸಭ್ಯವಾಗಿ ವರ್ತಿಸುವಂತಿಲ್ಲ ವರ್ತಿಸುವುದು ಕಂಡು ಬಂದಲ್ಲಿ ಸೆಕ್ಯೂರಿ ಮೈಕ್‌ನಲ್ಲಿ ಹೊರಗಡೆ ಕಳಿಸಲಾಗುತ್ತಿದೆ, ಅಲ್ಲದೇ ಲಾಠಿ ಚಾರ್ಜ್‌ ಮಾಡಲಾಗುತ್ತದೆ. ಇನ್ನೂ ಟ್ರಾನ್ಸ್‌ಜೆಂಡರ್‌ ಸಮುದಾಯದ ವ್ಯಕ್ತಿಗಳು ಕೂಡ ಪಾರ್ಕ್‌ ಅಸಭ್ಯವಾಗಿ ವರ್ತಿಸುವಂತಿಲ್ಲ ಎಚ್ಚರಿಕೆ ನೀಡಲಾಗಿದೆ .

ಹೀಗಾಗಿ ಎಗ್ಗಿಲ್ಲದೇ ಪಾರ್ಕ್‌ನಲ್ಲಿ ಪ್ರಯಣ ಪಕ್ಷಿಗಳು ಓಡಾವುದಕ್ಕೆ ಸದ್ಯ ಬ್ರೇಕ್‌ ಬೀಳುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ ಇನ್ಮುಂದೆ ಪಾರ್ಕ್‌ ಬರುವ ಮುನ್ನ ಈ ವಿಚಾರ ತಿಳಿದು ಬರುವುದು ಮುಖ್ಯವಾಗಿದೆ ಇಲ್ಲವಾದಲ್ಲಿ ಸಮಸ್ಯೆಯ ಸುಳಿಯಲ್ಲಿ ಸಿಲುಕುವುದು ಗ್ಯಾರಂಟಿ.

You may also like

Leave a Comment