Belagavi: ಕಳೆದ ವಾರದ ಬೆಳಗಾವಿಯ ಮಹಾಂತೇಶ್ ನಗರದ ಸಮಾಜ ಕಲ್ಯಾಣ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಬಿಸಿಎ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು ಇದೀಗ ಈ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮುಸ್ಲಿಂ ಯುವಕನ ಕಿರುಕುಳಕ್ಕೇ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಮೂಡಿದೆ.
ಹೌದು, ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಚಿಕ್ಕಮಲ್ಲೂರು ಗ್ರಾಮದ ನಿವಾಸಿಯಾದ ಶಿಲ್ಪಾ (22) ಬೆಳಗಾವಿಯಲ್ಲಿ ಬಿಸಿಎ ಓದುತ್ತಿದ್ದಳು. ಕಳೆದ ವಾರ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು ಇದಕ್ಕೆ ಅನ್ಯ ಕೋಮಿನ ಯುವಕನ ಟಾರ್ಚರ್ ಕಾರಣ ಎನ್ನಲಾಗಿದೆ.
ವರದಿಗಳ ಪ್ರಕಾರ ಶಿಲ್ಪಾ ನವೀನ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ನವೀನ್ ಶಿಗ್ಗಾವಿಯ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಮೂರು ವರ್ಷಗಳಿಂದ ಶಿಲ್ಪಾ ನವೀನ್‌ನನ್ನು ಪ್ರೀತಿಸುತ್ತಿದ್ದಳು. ಆದರೆ ನವೀನ್ ಕೆಲಸ ಮಾಡುತ್ತಿದ್ದ ಫರ್ನಿಚರ್ ಅಂಗಡಿಯ ಮಾಲೀಕ ರಂಜಾನ್ ನದಾಫ್ ಶಿಲ್ಪಾಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದಮ್ ಹೀಗಾಗಿ ಶಿಲ್ಪಾ ಮುಸ್ಲಿಂ ವ್ಯಕ್ತಿಯ ಕಿರುಕುಳ ತಾಳಲಾರದೆ ಕಳೆದ ಒಂದು ವಾರದ ಹಿಂದೆ ಹಾಸ್ಟೆಲ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
