Tiger Death: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ವನ್ಯಧಾಮನ ಕೊಪ್ಪ ವಲಯ ಒಂದರಲ್ಲೇ ಐದು ಹುಲಿಗಳ ಶವ ಪತ್ತೆಯಾಗಿತ್ತು. ಹುಲಿಯ ಸಾವು ರಾಜ್ಯದಲ್ಲೇ ಭಾರೀ ಚರ್ಚೆಗೆ ಕಾರಣವಾಗಿತ್ತು.
ಎಲ್ಲಾ ಐದು ಹುಲಿಗಳ ಮರಣೋತ್ತರ ಪರೀಕ್ಷೆ ನಡೆದಿತ್ತು. ನಿನ್ನೆ ತಾಯಿ ಹುಲಿಯ ಮರಣೋತ್ತರ ಪರೀಕ್ಷೆ ನಡೆದಿತ್ತು. ಇಂದು ನಾಲ್ಕು ಹುಲಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಎಪಿಸಿಸಿಎಫ್ ನೇತೃತ್ವದಲ್ಲಿ ಪ್ರಾಣಿ ಶಾಸ್ತ್ರಜ್ಞರು, ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆದಿದೆ.
5 ಹುಲಿಗಳು ವಿಷ ಪ್ರಾಷನದಿಂದ ಮೃತಪಟ್ಟಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಹೇಳಿದ್ದಾರೆ.
ತಾಯಿ ಹುಲಿಗೆ 8 ವರ್ಷ, ಮರಿ ಹುಲಿಗಳಿಗೆ 10 ತಿಂಗಳು ಆಗಿತ್ತು. ಹಸುವಿನಲ್ಲಿರುವ ವಿಷದ ಮಾಂಸ ತಿಂದು ಹುಲಿಗಳು ಮೃತ ಹೊಂದಿದೆ.
ನಾಲ್ವರು ಶಂಕಿತ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರತೇಕ ಪ್ರತ್ಯೇಕವಾಗಿ ಎಲ್ಲರ ವಿಚಾರಣೆ ನಡೆಯುತ್ತಿದೆ. ಗಾಜನೂರು, ಕೊಪ್ಪ, ಮೀಣ್ಯಂ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟಿರುವ ಕುರಿತು ವರದಿಯಾಗಿದೆ.
