Home » Belthangady : ಮಿತ್ತಬಾಗಿಲು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಲವ್, ಸೆಕ್ಸ್, ದೋಖಾವೇ ಇದಕ್ಕೆ ಮೇನ್ ರೀಸನ್? ಪೋಷಕರೇ ಬಿಚ್ಚಿಟ್ಟರು ಸ್ಪೋಟಕ ಸತ್ಯ!!

Belthangady : ಮಿತ್ತಬಾಗಿಲು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಲವ್, ಸೆಕ್ಸ್, ದೋಖಾವೇ ಇದಕ್ಕೆ ಮೇನ್ ರೀಸನ್? ಪೋಷಕರೇ ಬಿಚ್ಚಿಟ್ಟರು ಸ್ಪೋಟಕ ಸತ್ಯ!!

0 comments

Belthangady : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತ ಬಾಗಿಲು ವಿದ್ಯಾರ್ಥಿನಿಯೋರ್ವಳು ಇತ್ತೀಚಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ರಸ್ಟ್ ಸಿಕ್ಕಿದ್ದು ಲವ್, ಸೆಕ್ಸ್, ದೋಖಾವೇ ಇದಕ್ಕೆ ಕಾರಣ ಎಂಬದು ತಿಳಿದು ಬಂದಿದೆ.

ಹೌದು, ದಕ್ಷಿಣ ಕನ್ನಡ(Dakshina Kannada)ಜಿಲ್ಲೆ ಬೆಳ್ತಂಗಡಿ(Belthangady )ತಾಲೂಕಿನ ಮಿತ್ತಬಾಗಿಲು(Mittabagilu) ಗ್ರಾಮದಲ್ಲಿ ಘಟನೆ ನಡೆದಿದ್ದು, 17ರ ಅಪ್ರಾಪ್ತೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಿತ್ತಬಾಗಿಲಿನ ಕೋಡಿ ನಿವಾಸಿಯಾಗಿರುವ ಹೃಷ್ಟಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಕೆಲ ದಿನಗಳ ಹಿಂದೆ ಆಕೆ ಅಚಾನಕ್‌ ಆಗಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಬಳಿಕ ಪುತ್ರಿಯ ಸಾವಿಗೆ ಸಂಬಂಧಿ ಪ್ರವೀಣ್ ಚಾರ್ಮಾಡಿ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಹುಡುಗಿಗೆ ಸಂಬಂಧಿ ಪ್ರವೀಣ್ ಚಾರ್ಮಾಡಿ(Praveen Charmadi)ಲವ್ ಆಗಿತ್ತು. ಮದುವೆ ಆಗುವುದಾಗಿ ಆಕೆ ಜೊತೆ ಲೈಂಗಿಕ ಸಂಪರ್ಕ ಕೂಡ ನಡೆಸಿದ್ದಾನೆ. ಬಳಿಕ ಮದುವೆ ಆಗುವುದಿಲ್ಲ ಎಂದು ದೋಖಾ ಮಾಡಿದ್ದಾನೆ. ಇದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕುಟುಂಬಸ್ಥರು ದೂರಿದ್ದಾರೆ. ಪ್ರವೀಣ್ ವಿರುದ್ಧ ಹೃಷ್ವಿ ಪೋಷಕರಿಂದ ದೂರು ದಾಖಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಹೃಷ್ವಿ ಆತ್ಮಹತ್ಯೆ ಬಳಿಕ ಆರೋಪಿ ಪ್ರವೀಣ್​ ಪರಾರಿಯಾಗಿದ್ದಾನೆ. ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

You may also like

Leave a Comment