Maharastra : 90ರ ಹತ್ತಿರದ ಆಸು ಪಾಸಿನ ವೃದ್ಧ ದಂಪತಿಯೊಂದು ಇತ್ತೀಚಿಗೆ ಜ್ಯುವೆಲರಿ ಶಾಪ್ ಗೆ ತೆರಳಿ ಚಿನ್ನದ ಮಾಂಗಲ್ಯ ಸರವನ್ನು ಕೊಂಡುಕೊಳ್ಳಲು ಮುಂದಾಗಿದ್ದರು. ಆದರೆ ಈ ವೇಳೆ ಶಾಪ್ ಮಾಲಿಕ ಅವರಿಗೆ ಕಿವಿ ಓಲೆ ಮತ್ತು ಸರವನ್ನು ಉಚಿತವಾಗಿ ನೀಡಿ ಸಾಕಷ್ಟು ಸುದ್ದಿಯಾಗಿದ್ದರು. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಇದೀಗ ಈ ಘಟನೆಗೆ ಟ್ರಸ್ಟ್ ಸಿಕ್ಕಿದ್ದು ಅಸಲಿ ಸತ್ಯವನ್ನು ಅಂಗಡಿ ಮಾಲೀಕರೇ ಬಯಲು ಮಾಡಿದ್ದಾರೆ.
ಹೌದು, 90ರ ಆಸು ಪಾಸಿನ ವೃದ್ಧ ದಂಪತಿಯೊಂದು ಪಂಡರಾಪುರ ವಿಠಲನ ದರ್ಶನಕ್ಕೆ ತೆರಳಿತ್ತು. ಆ ಹಿರಿಯ ಜೀವಕ್ಕೆ ಪಾಂಡುರಂಗನ ದರ್ಶನ ಮೊದಲು ತಮ್ಮ ಪತ್ನಿಗೆ ಚಿನ್ನದ ಕರಿಮಣಿ ಸರ ಕೊಡಿಸಬೇಕು ಎಂಬ ಬಯಕೆ ಅವರದಾಗಿತ್ತು. ಅದರಂತೆ ಈ ಹಣ್ಣು ಹಣ್ಣು ಪ್ರಾಯದ ಅಜ್ಜ ತಮ್ಮ ಪತ್ನಿಯನ್ನು ಕರೆದುಕೊಂಡು ತಾವು ಎಷ್ಟೋ ಕಾಲದಿಂದ ಕೂಡಿಟ್ಟ ಚಿಲ್ಲರೆ ಪಲ್ಲರೆ ಹಣವನ್ನೆಲ್ಲಾ ತೆಗೆದುಕೊಂಡು ಬಂದು ಚಿನ್ನದ ಅಂಗಡಿಯೊಂದಕ್ಕೆ ಬಂದಿದ್ದರು. ಪಾಂಡುರಂಗನ ದರ್ಶನಕ್ಕೆ ಹೊರಟ ಈ ಇಳಿಪ್ರಾಯದ ಜೋಡಿಯನ್ನು ನೋಡಿ ಆ ಜ್ಯುವೆಲ್ಲರಿ ಶಾಪ್ ಮಾಲೀಕರಿಗೆ ಏನನಿಸಿತೋ ಏನೋ ಅಜ್ಜ ಅಜ್ಜಿಯ ಬಳಿಯಿಂದ ಯಾವ ಕಾಸನ್ನು ಪಡೆಯದೇ ಕೇವಲ ಹತ್ತು ರೂಪಾಯಿಯನ್ನು ಪಡೆದು, ಆಶೀರ್ವಾದವನ್ನು ಮಾತ್ರ ಬೇಡಿ ಜ್ಯುವೆಲ್ಲರಿ ಮಾಲೀಕರು ಅಜ್ಜನ ಆಸೆ ಈಡೇರಿಸಿದ್ದರು.
ಜ್ಯುವೆಲ್ಲರಿ ಶಾಪ್ ನೀಡಿದ ಈ ಬಂಗಾರದ ಸರಕ್ಕೆ ಕಡಿಮೆ ಎಂದರೂ ಇಂದಿನ ಚಿನ್ನದ ದರದ ಮುಂದೆ ಎರಡು ಲಕ್ಷಕ್ಕಿಂತ ಮೇಲಾಗುವುದು ಪಕ್ಕಾ ಇಂದಲ್ಲ ಹೇಳಲಾಗಿತ್ತು. ವೃದ್ಧನಿಗೆ ತನ್ನ ಪತ್ನಿಗೆ ಚಿನ್ನ ಕೊಡಿಸುವ ಮುಗ್ಧ ಪ್ರೇಮದ ಜೊತೆ ಜ್ಯುವೆಲ್ಲರಿ ಶಾಪ್ ಮಾಲೀಕನ ಉದಾರತೆ ಸಾಕಷ್ಟು ವೈರಲ್ ಆಗಿತ್ತು. ಅದರೀಗ ಅಂಗಡಿ ಮಾಲೀಕ ನೀಡಿದ್ದು ನಿಜವಾದ ಚಿನ್ನದ ಸರವೆಲ್ಲವೆಂಬುದು ಬಯಲಾಗಿದೆ. ಈ ಕುರಿತಾಗಿ ಸ್ವತಹ ಅಂಗಡಿ ಮಾಲೀಕರೇ ಸತ್ಯದ ಸಂಗತಿ ಏನೆಂದು ತಿಳಿಸಿದ್ದಾರೆ.
ಚಿನ್ನದ ಅಂಗಡಿ ಮಾಲೀಕರು ಏನಂದ್ರು?
ವೃದ್ಧ ದಂಪತಿಗೆ 20 ರೂ.ಗೆ ಮಂಗಳಸೂತ್ರ ನೀಡಿದ ಗೋಪಿಕಾ ಜ್ಯುವೆಲ್ಲರ್ಸ್‌ನ ಮಾಲೀಕ ನೀಲೇಶ್ ಮಾತನಾಡಿ, ” ವೃದ್ಧ ದಂಪತಿಗಳು ಸ್ವಾಭಿಮಾನಿ ಜನರು. ಹಣ ನೀಡಿದ ನಂತರವೇ ಅನ್ನು ಪಡೆಯಲು ಭಯಸಿದರು. ನಾನು ಅವರ ನಡುವಿನ ಪ್ರೀತಿ ಕಂಡು ಹಣ ಬೇಡ ಎಂದು ನಿರಾಕರಿಸಿದೆ. ನಾವು ಅವರಿಗೆ ಸರ ಮತ್ತು ತಾಳಿ ಅನ್ನು ನೀಡಿದೆವು. ಒಂದು ಗ್ರಾಂ ಚಿನ್ನದ ಆಭರಣವಾಗಿದ್ದು, ಚಿನ್ನದ ಲೇಪನವಿತ್ತಷ್ಟೆ. ಎರಡೂ ಆಭರಣಗಳ ಬೆಲೆ ಸುಮಾರು 3000 ರೂಪಾಯಿಗಳು. ಅವರು ಹಠ ಮಾಡಿದರು ಎಂಬ ಕಾರಣಕ್ಕೆ ಇಬ್ಬರಿಂದಲೂ ತಲಾ 10 ರೂಪಾಯಿ ಪಡೆದುಕೊಂಡೆ ” ಎಂದು ಆ ದಿನದ ಘಟನೆ ವಿವರಿಸಿದ್ದಾರೆ.
