Home » Dharmasthala: ಧರ್ಮಸ್ಥಳ ಕೇಸ್’ನ ಬಿಗ್ ಅಪ್ಡೇಟ್ – ಹೆಣ ಹೂತಿಟ್ಟ 17 ಸ್ಥಳಗಳನ್ನು ಗುರುತಿಸಿದ ಅನಾಮಿಕ ‘ಭೀಮ’, ನಾಳೆ ಉತ್ಖನನ ಕಾರ್ಯ

Dharmasthala: ಧರ್ಮಸ್ಥಳ ಕೇಸ್’ನ ಬಿಗ್ ಅಪ್ಡೇಟ್ – ಹೆಣ ಹೂತಿಟ್ಟ 17 ಸ್ಥಳಗಳನ್ನು ಗುರುತಿಸಿದ ಅನಾಮಿಕ ‘ಭೀಮ’, ನಾಳೆ ಉತ್ಖನನ ಕಾರ್ಯ

0 comments

Dharmasthala : ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಕ್ಷಿಪ್ರ ವೇಗವನ್ನು ಪಡೆದುಕೊಳ್ಳುತ್ತಿದೆ. ಎಸ್ಐಟಿ ತಂಡವು ಎರಡು ದಿನಗಳ ವಿಚಾರಣೆಯ ಬಳಿಕ ಇಂದು ಅನಾಮಿಕ ವ್ಯಕ್ತಿಯನ್ನು ಧರ್ಮಸ್ಥಳದ ನೇತ್ರಾವತಿಯ ಕಾಡಿಗೆ ಕರೆದೊಯ್ದು ಸ್ಥಳ ಮಹಜರನ್ನು ನಡೆಸಿದೆ. ಈ ವೇಳೆ ಮಹತ್ವದ ಬೆಳವಣಿಗೆ ನಡೆದಿದೆ.

ಹೌದು, ಇಂದು ಬೆಳಗ್ಗೆ ಸರಿ ಸುಮಾರು 11 ಗಂಟೆಯ ವೇಳೆಗೆ ಧರ್ಮಸ್ಥಳದ ಬಳಿಯ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ದಟ್ಟ ಕಾಡಿನ ಪ್ರದೇಶದಲ್ಲಿ ಎಸ್ ಐ ಟಿ ತಂಡ ಮುಸುಕು ದಾರಿ ಅನಾಮಿಕ ವ್ಯಕ್ತಿಯನ್ನು ಕರೆದುಕೊಂಡು ಸ್ಥಳ ಮಹಾಜರು ನಡೆಸಿದೆ. ಈ ಸಂದರ್ಭದಲ್ಲಿ ಆತ ತಾನು ಹೆಣವನ್ನು ಹೂತಿದ್ದ ಸುಮಾರು 17 ಸ್ಥಳಗಳನ್ನು ಗುರುತಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಮೊದಲಿಗೆ ಎಂಟು ಸ್ಥಳಗಳನ್ನು ಗುರುತಿಸಿದ್ದ ಅನಾಮಿಕ ವ್ಯಕ್ತಿ ಮಧ್ಯಾನ ಊಟದ ವಿರಾಮದ ಬಳಿಕ ಮತ್ತಷ್ಟು ಸ್ಥಳಗಳನ್ನು ಗುರುತಿಸಿ ಇದೀಗ 17 ಸ್ಥಳಗಳನ್ನು ತೋರಿಸಿದ್ದಾನೆ ಎಂಬ ಮಾಹಿತಿ ದೊರೆತಿದೆ. ಅನಾಮಿಕ ವ್ಯಕ್ತಿ ತೋರಿಸಿದ ಸ್ಥಳಗಳನ್ನು ಎಸ್ಐಟಿ ತಂಡವು ದಾಖಲು ಮಾಡಿಕೊಂಡಿದೆ. ಈ ಕಾರ್ಯಾಚರಣೆ ರಾತ್ರಿವರೆಗೂ ಮುಂದುವರೆಯಲಿದ್ದು ಇನ್ನಷ್ಟು ಮಾಹಿತಿಗಳು, ಸಾಕ್ಷಾಧಾರಗಳು ಲಭ್ಯವಾಗುವ ಸಾಧ್ಯತೆ ಇದೆ. ಇನ್ನು ಆತ ಗುರುತಿಸಿದ ಸ್ಥಳಗಳಲ್ಲಿ ನಾಳೆ ಅಂದರೆ ಜುಲೈ 29ರಂದು ಉತ್ಖನನ ಕಾರ್ಯ ಕೂಡ ಶುರುವಾಗಲಿದೆ.

ಈಗಾಗಲೇ ಸ್ಥಳದಲ್ಲಿ ಅರಣ್ಯ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಗಳು ಕಂದಾಯ ಇಲಾಖೆ ಅಧಿಕಾರಿಗಳು ಎಲ್ಲರೂ ಸೇರಿದ್ದು ಎಸ್ಐಟಿ ತಂಡಕ್ಕೆ ಸಾತ್ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಸುಮಾರು 40ಕ್ಕೂ ಹೆಚ್ಚು ರಾಜ್ಯ ಹಾಗೂ ರಾಷ್ಟ್ರಮಟ್ಟದ ಮಾಧ್ಯಮ ವರದಿಗಾರರು ಇಲ್ಲಿ ನೆರದಿದ್ದಾರೆ.

ಇದನ್ನೂ ಓದಿ: Operation Mahadev: ಆಪರೇಷನ್‌ ಮಹಾದೇವ್‌ – ಪಹಲ್ಗಾಮ್ ದಾಳಿಯ ಮಾಸ್ಟ‌ರ್ ಮೈಂಡ್ ಮತ್ತು ಮೂವರು ಭಯೋತ್ಪಾದಕರ ಹತ್ಯೆ – ವರದಿ

You may also like