Home » Bigg boss: 100% ಇವರೇ ಬಿಗ್‌ ಬಾಸ್‌ ಗೆಲ್ಲೋದು: ಶಿವಣ್ಣ

Bigg boss: 100% ಇವರೇ ಬಿಗ್‌ ಬಾಸ್‌ ಗೆಲ್ಲೋದು: ಶಿವಣ್ಣ

0 comments

   Bigg boss: ಬಿಗ್‌ ಬಾಸ್ ಸೀಸನ್ 12 ರ (Bigg Boss Kannada 12) ಆವೃತ್ತಿ ಮುಕ್ತಾಯಕ್ಕೆ ಇನ್ನೆರಡು ದಿನ ಬಾಕಿಯಿದ್ದು, ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಅದ್ರಲ್ಲೂ ಫಿನಾಲೆ ಓಟದಲ್ಲಿರುವ ಗಿಲ್ಲಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಸೆಲೆಬ್ರಿಟಿಗಳು, ರಾಜಕಾರಣಿಗಳು, ಕರುನಾಡಿನ ಜನರು, ಕಲಾವಿದರು ಗಿಲ್ಲಿಯ ಬೆನ್ನಿಗೆ ನಿಂತಿದ್ದಾರೆ. ಇದೇ ನಿಟ್ಟಿನಲ್ಲಿ ನಟ ಶಿವರಾಜ್‌ ಕುಮಾರ್ (Shivarajkumar) ಗಿಲ್ಲಿಯ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಜೊತೆಗೆ ಗಿಲ್ಲಿನೇ ಗೆಲ್ಲೋದು ಅಂತ ಟೇಬಲ್ ‌ಕುಟ್ಟಿ ಹೇಳಿದ್ದಾರೆ.

ಹೌದು. ಪ್ರೆಸ್‌ಮೀಟ್‌ವೊಂದರಲ್ಲಿ ಮಾತನಾಡುತ್ತಾ ಶಿವಣ್ಣ, ಗಿಲ್ಲಿಗೆ (Gilli Nata) ವಿಶ್ ಮಾಡಿದ್ದಾರೆ. 100% ಗಿಲ್ಲಿನೇ ಗೆಲ್ಲೋದು ಅಂತ ಅಂದಿದ್ದಾರೆ. ತುಂಬಾ ಓಪನ್‌ ಆಗಿ ಮಾತಾಡ್ತಾನೆ, ಎಲ್ಲೂ ಫೇಕ್‌ ಇಲ್ಲ, ಗುಡ್‌ ಹಾರ್ಟ್‌ ಇದೆ. ಒಳ್ಳೇ ವ್ಯಕ್ತಿಗೆ ಪ್ರಚಾರ ಬೇಕಿಲ್ಲ, ತಾನಾಗೇ ಸಿಗುತ್ತೆ. ಗಿಲ್ಲಿ ತುಂಬಾ ಸ್ಟ್ರೇಟ್‌ ಫಾರ್ವರ್ಡ್‌. ಕೆಲವರು ಕಂಟೆಂಟ್‌ಗೋಸ್ಕರ ಮಾಡ್ತಾರೆ. ಆದ್ರೆ ಗಿಲ್ಲಿ ನ್ಯಾಚುರಲ್‌, ಕೋಪ, ಸಾಫ್ಟ್‌ನೆಸ್‌, ನಾಟಿನೆಸ್‌ ಇದೆ. ಇಲ್ಲಿನೇ ಗೆಲ್ಲೋದು ಅಂತ ಹೇಳಿದ್ದಾರೆ.

ಬಿಗ್‌ಬಾಸ್ ಕನ್ನಡ 12′ ಫಿನಾಲೆ ಜನವರಿ 17 ಮತ್ತು 18ರಂದು ನಡೆಯಲಿದೆ. ಅಶ್ವಿನಿ ಗೌಡ, ಧನುಷ್, ರಕ್ಷಿತಾ ಶೆಟ್ಟಿ, ಮ್ಯೂಟೆಂಟ್ ರಘು, ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಅವರು ಫಿನಾಲೆ ತಲುಪಿದ್ದಾರೆ. ಇವರುಗಳ ಪೈಕಿ ಗಿಲ್ಲಿ ಗೆಲ್ಲೋದು ಪಕ್ಕಾ ಅಂತಾ ನಟ ಶಿವರಾಜ್‌ ಕುಮಾರ್ ಹೇಳಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.

You may also like