Home » Rakshak Bullet: ಬಿಗ್‌ಬಾಸ್‌ ಸ್ಪರ್ಧಿ ರಕ್ಷಕ್‌ ಬುಲೆಟ್‌ ಕ್ಷಮೆಯಾಚನೆ!

Rakshak Bullet: ಬಿಗ್‌ಬಾಸ್‌ ಸ್ಪರ್ಧಿ ರಕ್ಷಕ್‌ ಬುಲೆಟ್‌ ಕ್ಷಮೆಯಾಚನೆ!

0 comments

Rakshak Bullet: ನಟ ದರ್ಶನ್‌ ಅಭಿನಯದ ಬುಲ್‌ ಬುಲ್‌ ಸಿನಿಮಾ ಡೈಲಾಗ್‌ನ್ನು ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ -2 ಶೋ ನಲ್ಲಿ ಮರುಸೃಷ್ಟಿ ಮಾಡುವಾಗ ಡೈಲಾಗ್‌ ಕಾಂಟ್ರವರ್ಸಿ ಆಗಿದ್ದು, ಕೊನೆಗೂ ರಕ್ಷಕ್‌ ಕ್ಷಮೆ ಕೇಳಿದ್ದಾರೆ.

ರಕ್ಷಕ್‌ ಹೇಳಿದ್ದೇನು? 

ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ರಕ್ಷಕ್‌ ಬುಲೆಟ್.‌ ಇತ್ತೀಚೆಗೆ ಒಂದು ರಿಯಾಲಿಟಿ ಶೋನಲ್ಲಿ ನಾನು ಒಂದು ಹೆಸರಾಂತ ಚಿತ್ರದ ಡೈಲಾಗ್‌ನ್ನು ಒಂದು ಸ್ಕಿಟ್‌ನಲ್ಲಿ ಹೇಳಿದ್ದೆ. ಅದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನನ್ನ ತಂದೆಯವರಾದ ದಿವಂಗತ ಬುಲೆಟ್‌ ಪ್ರಕಾಶ್‌ ಅವರು, ನನ್ನ ತಾಯಿಯವರು ಹಾಗೂ ಎಲ್ಲ ನಮ್ಮ ಕುಟುಂಬದವರು ಪರಮ ದೈವ ಭಕ್ತರು. ನಮ್ಮ ತಂದೆಯವರಿದ್ದಾಗನಿಂದಲೂ ನಾವು ತಾಯಿ ಚಾಮುಂಡೇಶ್ವರಿಗೆ ಪೂಜೆ ಮಾಡುತ್ತ ನಡೆದುಕೊಂಡು ಬಂದಿದ್ದೇವೆ. ನಾನು ಉದ್ದೇಶಪೂರ್ವಕವಾಗಿ ತಾಯಿ ಚಾಮುಂಡೇಶ್ವರಿಯ ಕುರಿತು ಹೇಳುವಷ್ಟು ದೊಡ್ಡವನಲ್ಲ. ಆ ತಾಯಿಯ ಆಶೀರ್ವಾದದಿಂದ ಬೆಳೆಯುತ್ತಿದ್ದೇನೆ. ನಾನು ಉಆವುದೇ ಕಾರ್ಯ ಪ್ರಾರಂಭಿಸಬೇಕಾದರೆ ಮೊದಲು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ನಂತರ ಕೆಲಸವನ್ನು ಪ್ರಾರಂಭ ಮಾಡುತ್ತೇನೆ. ನಾನು ಭಕ್ತಾದಿಗಳ ಭಾವನೆಗಳಿಗಾಗಲಿ, ಮನಸ್ಸಿಗಾಗಲೀ ನೋವನ್ನು ಉಂಟು ಮಾಡುವ ಕೆಲಸ ಮಾಡುವುದಿಲ್ಲ. ಯಾರಿಗಾದರೂ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಮುಂದೆ ಇಂತಹ ಅಚಾತುರ್ಯ ನಡೆಯುವುದಿಲ್ಲ.

You may also like