Home » BBK 10: ‘ವರ್ತೂರು ಸಂತೋಷ್’ ಗೆ 14 ದಿನ ನ್ಯಾಯಾಂಗ ಬಂಧನ!!!

BBK 10: ‘ವರ್ತೂರು ಸಂತೋಷ್’ ಗೆ 14 ದಿನ ನ್ಯಾಯಾಂಗ ಬಂಧನ!!!

by Mallika
0 comments
Bigg Boss Santhosh

Bigg Boss Santhosh: ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಅವರಿಗೆ ಹುಲಿ ಉಗುರು ಧರಿಸಿದ ಆರೋಪದ ಮೇಲೆ ನ.6ರ ಬರೆಗೆ 14ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

2 ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶಕರು ನ.6 ರವರೆಗೆ ನ್ಯಾಯಾಂಗ ಬಂಧ ವಿಧಿಸಿದ್ದು ಸಂತೋಷ್‌ ಅವರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಮಾಡಲಾಗಿದೆ. ಭಾನುವಾರ ರಾತ್ರಿ ಹುಲಿ ಉಗುರು ಧರಿಸಿದ ಆರೋಪದ ಮೇಲೆ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟ ಅರಣ್ಯ ಇಲಾಖೆ ವರ್ತೂರು ಸಂತೋಷ್‌ ಅವರನ್ನು ಬಂಧನ ಮಾಡಲಾಗಿತ್ತು.

ಕತ್ತಿನಲ್ಲಿ ದೊಡ್ಡ ಚೈನು ಧರಿಸಿಕೊಂಡಿದ್ದ ಸಂತೋಷ್‌ ಅದರಲ್ಲಿ ಹುಲಿ ಉಗುರು ಇದೆ ಎಂದು ತಿಳಿದು ಬಂದಿದ್ದು, ಈ ಕಾರಣದಿಂದ ಸಂತೋಷ್‌ ಅವರನ್ನು ಬಂಧನ ಮಾಡಿದ್ದರು. ಬಿಗ್‌ಬಾಸ್‌ ಮನೆಯಲ್ಲಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ರೀತಿಯ ಬಂಧನ ಪ್ರಕ್ರಿಯೆ ನಡೆದಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಸಂತೋಷ್‌ ಅವರ ಕೊರಳಲ್ಲಿ ಹುಲಿಯ ಉಗುರು ಹಾಕಿಕೊಂಡ ದೂರು ಇತ್ತು. ಈ ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ವನ್ಯಜೀವಿ ಕಾನೂನಿನ ಆಧಾರದ ಮೇಲೆ ಅವರನ್ನು ಅರೆಸ್ಟ್‌ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹುಲಿ ಪೆಂಡೆಂಟ್‌ ಧರಿಸಿ ಬಂಧನಕ್ಕೊಳಗಾದ ವರ್ತೂರ್‌ ಸಂತೋಷ್‌! ಆರೋಪ ಸಾಬೀತಾದರೆ ಎಷ್ಟು ವರ್ಷ ಶಿಕ್ಷೆಯಾಗಬಹುದು?

 

ಇದನ್ನು ಓದಿ: ಆಧಾರ್ ಕಾರ್ಡ್’ನಲ್ಲಿರೋ ಮಾಹಿತಿಗಳನ್ನು ಸೇವ್ ಮಾಡಲು ಈಗಲೇ ಈ ಕೆಲಸ ಮಾಡಿ !!

You may also like

Leave a Comment