Home » Home ಹೊಸ ಕನ್ನಡ » Bigg boss: ಬಿಗ್ ಬಾಸ್ 12 ಗೆದ್ದ ಗಿಲ್ಲಿ: ಇಂದು ಮಳವಳ್ಳಿಯಿಂದ ಹುಟ್ಟೂರು ದಡದಪುರಕ್ಕೆ ಅದ್ದೂರಿ ಮೆರವಣಿಗೆ

Bigg boss: ಬಿಗ್ ಬಾಸ್ 12 ಗೆದ್ದ ಗಿಲ್ಲಿ: ಇಂದು ಮಳವಳ್ಳಿಯಿಂದ ಹುಟ್ಟೂರು ದಡದಪುರಕ್ಕೆ ಅದ್ದೂರಿ ಮೆರವಣಿಗೆ

A+A-
Reset

 bigg boss: ಗಿಲ್ಲಿ ನಟ (Gilli Nata) ಬಿಗ್ ಬಾಸ್ ಸೀಸನ್ 12 (Bigg Boss) ವಿನ್ನರ್ ಆಗಿದ್ದು, ತವರಲ್ಲಿ ಸಂಭ್ರಮ ಮನೆ ಮಾಡಿದೆ. ಮಳವಳ್ಳಿಯಿಂದ ಹುಟ್ಟೂರು ದಡದಪುರಕ್ಕೆ ವಿನ್ನರ್ ಗಿಲ್ಲಿಯನ್ನು ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತಿಸಲು ಭರ್ಜರಿ ತಯಾರಿ ನಡೆದಿದೆ.

Hindu neighbor gifts plot of land

Hindu neighbour gifts land to Muslim journalist

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಮಧ್ಯಾಹ್ನ 3 ಗಂಟೆಗೆ ಮೆರವಣಿಗೆ ಆರಂಭವಾಗಲಿದೆ. ಮಳವಳ್ಳಿ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗಲಿದೆ. ಬಳಿಕ ಗಿಲ್ಲಿ ಹುಟ್ಟೂರು ದಡದಪುರದ ವರೆಗೆ ಅದ್ದೂರಿ ಮೆರವಣಿಗೆ ನಡೆಯಲಿದೆ. 

ಗಿಲ್ಲಿ ವಿನ್ ಆಗ್ತಿದ್ದಂತೆ ತವರಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಜನರು ಮತ್ತು ಅಭಿಮಾನಿಗಳು ವಿನ್ನರ್‌ಗೆ ಅದ್ಧೂರಿ ಸ್ವಾಗತ ಕೋರಲು ತವರು ಮಳವಳ್ಳಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಗಿಲ್ಲಿ ನಟನಿಗೆ ಎಲ್ಲೆಡೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.