Home » Bigg Boss: ‘ಸವಿರುಚಿʼ ಕಾರ್ಯಕ್ರಮದಲ್ಲಿ ಅಡುಗೆ ಮಾಡಲು ಬಂದ ಜಗದೀಶ್‌ ಪತ್ನಿ

Bigg Boss: ‘ಸವಿರುಚಿʼ ಕಾರ್ಯಕ್ರಮದಲ್ಲಿ ಅಡುಗೆ ಮಾಡಲು ಬಂದ ಜಗದೀಶ್‌ ಪತ್ನಿ

0 comments

Bigg Boss; ಬಿಗ್‌ಬಾಸ್‌ ಮನೆಯಲ್ಲಿ ತನ್ನ ಆವಾಜ್‌ನಿಂದಲೇ ಕರ್ನಾಟಕ ಕ್ರಶ್‌ ಎಂದು ಖ್ಯಾತಿ ಪಡೆದಿರುವ ಜಗದೀಶ್‌ ಅವರ ಪತ್ನಿ ಲಾಯರ್‌ ಸೌಮ್ಯ ಸವಿರುಚಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಸವಿರುಚಿ ಕಾರ್ಯಕ್ರಮಕ್ಕೆ ಬಂದು ಅಡುಗೆ ಮಾಡಿ ಜಗದೀಶ್‌ ಅವರ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಜಗದೀಶ್‌ ಹೇಗೆ ಇದ್ದಾರೋ ಹಾಗೇ ಮನೆಯಲ್ಲೂ ಇರ್ತಾರೆ ಎಂದು ಸೌಮ್ಯ ಪ್ರೊಮೋದಲ್ಲಿ ಹೇಳಿದ್ದು, ಕಲರ್ಸ್‌ ಕನ್ನಡ ವೀಡಿಯೋ ಬಿಟ್ಟಿದೆ. ಇನ್ನು ಜಗದೀಶ್‌ ಕುರಿತು ಬೇರೆ ಯಾವ ರೀತಿ ಮಾತನಾಡಿದ್ದಾರೆ ಅನ್ನೋದನ್ನು ಎಪಿಸೋಡ್‌ ಫುಲ್‌ ನೋಡಿದರೆ ಮಾತ್ರ ತಿಳಿಯುತ್ತದೆ.

You may also like

Leave a Comment