Home » Bigg Boss Kannada season 12: ಬಿಗ್​​ಬಾಸ್ ಸೀಸನ್ 12 ಪ್ರಾರಂಭ ಯಾವಾಗ?

Bigg Boss Kannada season 12: ಬಿಗ್​​ಬಾಸ್ ಸೀಸನ್ 12 ಪ್ರಾರಂಭ ಯಾವಾಗ?

0 comments

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12 ರ (Bigg Boss Kannada season 12) ಮೊದಲ ಪ್ರೋಮೊ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿತ್ತು. ಆದರೆ ಸೀಸನ್ 12 ಯಾವಾಗಿನಿಂದ ಪ್ರಾರಂಭ ಆಗಲಿದೆ ಎಂಬ ದಿನಾಂಕವನ್ನು ಘೋಷಣೆ ಮಾಡಲಾಗಿರಲಿಲ್ಲ. ಇದೀಗ ಆಯೋಜಕರು ದಿನಾಂಕ ಘೋಷಣೆ ಮಾಡುವ ಮುಂಚೆಯೇ ನಟ ಸುದೀಪ್ ಅವರು ಬಿಗ್​ಬಾಸ್ ಕನ್ನಡ ಸೀಸನ್ 12ರ ಪ್ರಾರಂಭದ ದಿನಾಂಕ ಘೋಷಣೆ ಮಾಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಸುದೀಪ್ ಈ ಬಾರಿಯ ಬಿಗ್​​ಬಾಸ್ ಪ್ರಾರಂಭದ ದಿನಾಂಕ ಯಾವುದೆಂದು ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ನಿರ್ಮಾಪಕ, ಉದ್ಯಮಿ, ರಾಜಕಾರಣಿ ಸಂದೇಶ್ ನಾಗರಾಜ್ ಹುಟ್ಟುಹಬ್ಬದ‌ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಇನ್ನೂ ಹಲವು ಗಣ್ಯರು ಭಾಗಿ ಆಗಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಸುದೀಪ್ ಬಿಗ್​​ಬಾಸ್ ಬಗ್ಗೆಯೂ ಮಾತನಾಡಿದರು.

‘ಶೀಘ್ರವೇ ತೆರೆ ಮೇಲೆ ಬರಲಿದ್ದೇನೆ. ಸೆಪ್ಟೆಂಬರ್ 28ರಿಂದ ಕಿರುತೆರೆಗೆ ಬರಲಿದ್ದೇನೆ ಆಶೀರ್ವಾದ ಮಾಡಿ’ ಎಂದರು. ಆ ಮೂಲಕ ಬಿಗ್​​ಬಾಸ್ ಸೀಸನ್ 12 ಸೆಪ್ಟೆಂಬರ್ 28ಕ್ಕೆ ಪ್ರಾರಂಭ ಆಗಲಿದೆ ಎಂದು ಘೋಷಣೆ ಮಾಡಿದರು. ಈ ಬಾರಿಯೂ ಸುದೀಪ್ ಅವರೇ ಬಿಗ್​​ಬಾಸ್ ನ ನಿರೂಪಣೆ ಮಾಡಲಿದ್ದು, ದಿನಾಂಕವನ್ನೂ ಅವರೇ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

You may also like