7

Bigg boss: ಬಿಗ್‌ಬಾಸ್ ಕನ್ನಡ 12 ಫಿನಾಲೆ ಆರಂಭ ಆಗಿದೆ. ಬಿಗ್ ಬಾಸ್ ಸೀಸನ್ 12ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರು ರಘು . ಧನುಷ್ ಗೌಡ, ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯ ಶೈವ, ರಕ್ಷಿತಾ ಶೆಟ್ಟಿ ಹಾಗೂ ಮ್ಯೂಟೆಂಟ್ ರಘು ಫಿನಾಲೆ ತಲುಪಿದ್ದರು. ಆದರೆ ರಘು ಕೂಡ ಟಫ್ ಫೈಟ್ ಕೊಟ್ಟವರು. ಟ್ರೋಫಿ ಗೆಲ್ತಾರೆ ಅಂದುಕೊಂಡವರಿಗೆ ನಿರಾಸೆ ಆಗಿದೆ. ಈಗ ಮನೆಯಿಂದ ಹೊರಗೆ ಬಂದಿದ್ದಾರೆ ರಘು.

ಧನುಷ್ 5th Runner Up ಆದ್ರೆ, ಟಾಪ್ 4th ಆಗಿ ರಘು ಹೊರಹೊಮ್ಮಿದ್ದಾರೆ. ಧನುಷ್ ಬೆನ್ನಲ್ಲೇ ರಘು ಮನೆಯಿಂದ ಔಟ್ ಆಗಿದ್ದಾರೆ. ರಘು ಅಂದರೆ ಮೊದಲಿಗೆ ಇಡೀ ಮನೆಗೆ ಅನ್ನ ನೀಡೋ ನಳಮಹಾರಾಜ ಆಗಿದ್ದರು. ಎಷ್ಟೇ ಕೋಪ, ತಾಪ ಇದ್ರೂ ಅಡುಗೆ ಮನೆಯಲ್ಲಿ ರಘು ವೆರೈಟಿ ತಿಂಡಿ, ತಿನಿಸುಗಳನ್ನ ಮಾಡೋದನ್ನ ಮರೆಯುತ್ತಿರಲಿಲ್ಲ. ಆ ವಿಚಾರಕ್ಕೆ ಸಾಕಷ್ಟು ಬಾರಿ ಗಿಲ್ಲಿ ಜೊತೆ ಜಗಳ ಆಗಿದ್ದೂ ಇದೆ.
